ಕರ್ನಾಟಕ

karnataka

ETV Bharat / bharat

DRDO ಅಭಿವೃದ್ಧಿ ಪಡಿಸಿರುವ ಕೋವಿಡ್​ ಲಸಿಕೆಯಲ್ಲಿ ಈ ಯುವ ವಿಜ್ಞಾನಿ ಪಾತ್ರ ಅನನ್ಯ - ಯುವ ವಿಜ್ಞಾನಿ ಡಾ. ಜೂಬಿಲಿ ಪುರ್ಕಯಸ್ಥ

ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ಅಭಿವೃದ್ಧಿಗೊಂಡಿರುವ ಕೋವಿಡ್​ ಲಸಿಕೆಯಲ್ಲಿ ಯುವ ವಿಜ್ಞಾನಿ ಪಾತ್ರ ಮಹತ್ವದಾಗಿದೆ.

Dr Jubilee Purkayastha
Dr Jubilee Purkayastha

By

Published : May 22, 2021, 3:33 PM IST

ಕರೀಂಗಂಜ್​(ಅಸ್ಸೋಂ): ಕೊರೊನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವ ರಕ್ಷಣಾ ಸಂಶೋಧನಾ ವಿಭಾಗ (ಡಿಆರ್​ಡಿಒ) ಈಗಾಗಲೇ ಕೋವಿಡ್ ಲಸಿಕೆ ಕಂಡು ಹಿಡಿದಿದೆ.

ಕೋವಿಡ್ ವಿರುದ್ಧ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​​​​ಡಿಒ) ಅಭಿವೃದ್ಧಿಪಡಿಸಿರುವ 2ಡಯಾಕ್ಸಿ - ಡಿ - ಗ್ಲೂಕೋಸ್​ ಈಗಾಗಲೇ ದೇಶದಲ್ಲಿ ರಿಲೀಸ್​ ಆಗಿದ್ದು, ಲಸಿಕೆ ಅಭಿವೃದ್ಧಿಪಡಿಸಿರುವ ತಂಡದಲ್ಲಿ ಅಸ್ಸೋಂ ವಿಜ್ಞಾನಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಯುವ ವಿಜ್ಞಾನಿ ಡಾ.ಜೂಬಿಲಿ

ಅಸ್ಸೋಂನ ಬರಾಕ್ ಕಣಿವೆಯ ಯುವ ವಿಜ್ಞಾನಿ ಡಾ. ಜೂಬಿಲಿ ಪುರ್ಕಯಸ್ಥ (Dr Jubilee Purkayastha) ಸಹ ಇದರಲ್ಲಿ ಭಾಗಿಯಾಗಿದ್ದಾರೆ. ಕರೀಂಗಂಜ್​ ಕಾಲೇಜ್​ನಲ್ಲಿ ಅಧ್ಯಯನ ಮಾಡಿದ್ದ ಇವರು 2008ರಲ್ಲಿ ತೇಜಪುರದ ಡಿಆರ್​​ಡಿಒ ಡಿಫೆನ್ಸ್​ ರಿಸರ್ಚ್​ ಲ್ಯಾಬೋರೇಟರಿಯಲ್ಲಿ ವಿಜ್ಞಾನಿಯಾಗಿ ಸೇರಿಕೊಂಡರು. ಇದಾದ ಬಳಿಕ 2014ರಲ್ಲಿ ದೆಹಲಿಗೆ ವರ್ಗಾವಣೆಗೊಂಡಿದ್ದರು

ಇದನ್ನೂ ಓದಿ: ಬ್ಲ್ಯಾಕ್​​​​​ ಫಂಗಸ್​​ಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಿ: ಪ್ರಧಾನಿಗೆ ಸೋನಿಯಾ ಪತ್ರ

ಕೋವಿಡ್​ ಲಸಿಕೆ ಅಭಿವೃದ್ಧಿ ಪಡಿಸಿರುವ ತಂಡದಲ್ಲಿ ಗುರುತಿಸಿಕೊಂಡಿರುವ ಅವರಿಗೆ ಈಗಾಗಲೇ ಅನೇಕರು ಕೃತಜ್ಞತೆ ಸಲ್ಲಿಕೆ ಮಾಡಿದ್ದು, ತಮ್ಮ ದೇಶಕ್ಕಾಗಿ ಸಾಕಷ್ಟು ಕೆಲಸ ಮಾಡುವ ಹಂಬಲ ಇಟ್ಟುಕೊಂಡಿದ್ದಾರೆ. ಹೈದರಾಬಾದ್​ನ ಡಾ. ರೆಡ್ಡಿಸ್​ ಪ್ರಯೋಗಾಲಯಗಳ ಸಹಯೋಗದಿಂದಿಗೆ ಡಿಆರ್​ಡಿಒ ಔಷಧ ಅಭಿವೃದ್ಧಿಪಡಿಸಿದೆ. ಇದಕ್ಕೆ ಈಗಾಗಲೇ ಭಾರತೀಯ ಔಷಧ ಪ್ರಾಧಿಕಾರದಿಂದ ತುರ್ತು ಬಳಕೆಗೆ ಅನುಮೋದನೆ ನೀಡಿದೆ.

ABOUT THE AUTHOR

...view details