ಕರ್ನಾಟಕ

karnataka

ETV Bharat / bharat

ಮಿಜೋರಾಂ ಮತ್ತು ಮಣಿಪುರದಲ್ಲಿ ಕಳ್ಳಸಾಗಣೆಯ ವಸ್ತುಗಳು ವಶಕ್ಕೆ! - ಕಳ್ಳಸಾಗಣೆ ವಸ್ತುಗಲನ್ನು ವಶಕ್ಕೆ ಪಡೆದ ಅಸ್ಸೋಂ ರೈಫಲ್ಸ್

ಮೇ 28ರಂದು ಅಸ್ಸೋಂ ರೈಫಲ್ಸ್‌ನ ಟೆಂಗ್ನೌಪಾಲ್ ಬೆಟಾಲಿಯನ್ ಎರಡು ಟ್ರಕ್‌ಗಳನ್ನು ತಡೆದು ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯ ಖುಡೆಂಗ್‌ಥಾಬಿ ಗ್ರಾಮದ ಬಳಿ 9.24 ಕೋಟಿ ರೂ. ಮೌಲ್ಯದ ಅಡಿಕೆ, ಅಫೀಮು ಮತ್ತು ಮರದ ದಿಮ್ಮಿಗಳು ಸೇರಿದಂತೆ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡಿದೆ..

Assam Rifles seizes contraband worth over Rs 9 cr
Assam Rifles seizes contraband worth over Rs 9 cr

By

Published : May 29, 2021, 3:49 PM IST

ಬಿಷ್ಣುಪುರ/ಲಾಂಗ್ಟ್‌ಲೈ(ಮಣಿಪುರ/ಮಿಜೋರಾಂ): ಮಿಜೋರಾಂ ಮತ್ತು ಮಣಿಪುರದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ 9 ಕೋಟಿ ರೂ. ಮೌಲ್ಯದ ಕಳ್ಳಸಾಗಣೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸೋಂ ರೈಫಲ್ಸ್ ಶುಕ್ರವಾರ ತಿಳಿಸಿದೆ.

ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್‌ನ ಜಂಟಿ ಕಾರ್ಯಾಚರಣೆಯಲ್ಲಿ ಅಸ್ಸೋಂ ಪೊಲೀಸರು ಮಿಜೋರಾಂನ ಲಾಂಗ್ಟ್‌ಲೈ ಜಿಲ್ಲೆಯಿಂದ 51.94 ಲಕ್ಷ ರೂ. ಮೌಲ್ಯದ ವಿದೇಶಿ ಮೂಲದ ಸಿಗರೇಟ್​ನ 39 ಕೇಸ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಕಾರ್ಯಾಚರಣೆಯಲ್ಲಿ ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯಲ್ಲಿ 9.24 ಕೋಟಿ ರೂ. ಮೌಲ್ಯದ ಅಡಿಕೆ, ಅಫೀಮು ಮತ್ತು ಮರದ ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ.

"ಮೇ 28ರಂದು ಅಸ್ಸೋಂ ರೈಫಲ್ಸ್‌ನ ಸೆರ್ಚಿಪ್ ಬೆಟಾಲಿಯನ್ ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್‌ನ ಜಂಟಿ ಕಾರ್ಯಾಚರಣೆಯಲ್ಲಿ ಮಿಜೋರಾಂನ ಲಾಂಗ್ಟ್‌ಲೈ ಜಿಲ್ಲೆಯ ಸಂಗೌ ಗ್ರಾಮದಲ್ಲಿ 51.94 ಲಕ್ಷ ರೂ. ಮೌಲ್ಯದ ವಿದೇಶಿ ಮೂಲದ ಸಿಗರೇಟ್​ನ 39 ಕೇಸ್​ಗಳನ್ನು ವಶಪಡಿಸಿಕೊಂಡಿದೆ" ಎಂದು ಅಸ್ಸೋಂ ರೈಫಲ್ಸ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮೂಲಕ ತಿಳಿಸಲಾಗಿದೆ.

"ಮೇ 28ರಂದು ಅಸ್ಸೋಂ ರೈಫಲ್ಸ್‌ನ ಟೆಂಗ್ನೌಪಾಲ್ ಬೆಟಾಲಿಯನ್ ಎರಡು ಟ್ರಕ್‌ಗಳನ್ನು ತಡೆದು ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯ ಖುಡೆಂಗ್‌ಥಾಬಿ ಗ್ರಾಮದ ಬಳಿ 9.24 ಕೋಟಿ ರೂ. ಮೌಲ್ಯದ ಅಡಿಕೆ, ಅಫೀಮು ಮತ್ತು ಮರದ ದಿಮ್ಮಿಗಳು ಸೇರಿದಂತೆ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡಿದೆ" ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಇದಕ್ಕೂ ಮುನ್ನ ಗುರುವಾರ, ಅಸ್ಸೋಂ ರೈಫಲ್ಸ್‌ನ ಲೋಕ್ತಕ್ ಬೆಟಾಲಿಯನ್ ಮಣಿಪುರದ ಬಿಷ್ಣುಪುರ ಜಿಲ್ಲೆಯ ಮೊಲ್ಹೋಯಿ ಗ್ರಾಮದಿಂದ ಜೆಲಿಯನ್‌ಗ್ರಾಂಗ್ ಯುನೈಟೆಡ್ ಫ್ರಂಟ್-ಜೆಂಚುಯಿ (ZUF-J) ಕೇಡರ್ ಅನ್ನು ಬಂಧಿಸಿತ್ತು.

ABOUT THE AUTHOR

...view details