ತೇಜ್‌ಪುರ (ಅಸ್ಸೋಂ): ದೇಶವಿರೋಧಿ ಚಟುವಟಿಕೆಗಳ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ, ಅಸ್ಸೋಂ ರೈಫಲ್ಸ್ ಪೂರ್ವ ಇನ್ಸ್ಪೆಕ್ಟರ್ ಜನರಲ್ ನೇತೃತ್ವದಲ್ಲಿ 23 ಸೆಕ್ಟರ್ ಅಸ್ಸಾಂ ರೈಫಲ್ಸ್‌ನ ಲುಂಗ್ಲೇ ಬೆಟಾಲಿಯನ್, ಸಿಯಾಹಾ ಜಿಲ್ಲೆಯ ತುಪಾಂಗ್ ಗ್ರಾಮದ ಬಳಿಯಲ್ಲಿ ಯುದ್ಧ ಸಾಮಗ್ರಿ ಸಂಗ್ರಹ ಸ್ಥಳವನ್ನು ಭೇದಿಸಿದ್ದು, ಅಸ್ತ್ರಗಳನ್ನು ವಶಪಡಿಸಿಕೊಂಡಿದೆ.
ಇಂದು ಬೆಳ್ಳಂಬೆಳಗ್ಗೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಗುವಾಹಟಿ ಮೂಲದ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ತಿಳಿಸಿದ್ದಾರೆ. ಮ್ಯಾನ್ಮಾರ್ ಮೂಲದ ದಂಗೆಕೋರರು ಯುದ್ಧ ಸಾಮಗ್ರಿಗಳನ್ನು ಸ್ಟೋರ್ ಮಾಡಿರುವ ಹಾಗೂ ಯುದ್ಧತಂತ್ರದ ಚಲನವಲನಗಳ ಬಗ್ಗೆ ತಂಡವು ನಿರ್ದಿಷ್ಟ ಮಾಹಿತಿಯನ್ನು ಹೊಂದಿತ್ತು. ಆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಅಸ್ಸಾಂ ರೈಫಲ್ಸ್ ಮತ್ತು ಸಿಯಾಹ ಪೊಲೀಸ್ ಠಾಣೆಯ ಪ್ರತಿನಿಧಿಗಳ ಜಂಟಿ ತಂಡವು ಕಾರ್ಯಾಚರಣೆ ನಡೆಸಿದೆ.
ಕಾರ್ಯಾಚರಣೆ ವೇಳೆ ತಂಡ ತೂಪಾಂಗ್ ಗ್ರಾಮದಲ್ಲಿ ಒಂದು ಕೆನ್ಬೋ ಬೈಕ್ ಮತ್ತು ಒಬ್ಬ ಯೋಧನನ್ನು ವಶಕ್ಕೆ ಪಡೆದಿದೆ. ಅಲ್ಲಿಂದ ಕಾರ್ಯಾಚರಣೆಯನ್ನು ಇನ್ನಷ್ಟು ಬಲಗೊಳಿಸಿದ ತಂಡಕ್ಕೆ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟ ಜಾಗ ಪತ್ತೆಯಾಗಿದೆ. ವಶಪಡಿಸಿಕೊಂಡ ಜಾಗದಲ್ಲಿ ಮಿಲಿಟರಿ ದರ್ಜೆಯ ಸಾಮಗ್ರಿಗಳು ದೊರೆತಿವೆ. ಮ್ಯಾನ್ಮಾರ್ ಮೂಲದ ದಂಗೆಕೋರರು ತಮ್ಮದೇ ಜನರ ವಿರುದ್ಧ ದೇಶ ವಿರೋಧಿ ಚಟುವಟಿಕೆಗಳಿಗಾಗಿ ಈ ಸಾಮಗ್ರಿಗಳನ್ನು ಬಳಸಲು ಯೋಜನೆ ರೂಪಿಸಿರುವುದು ಬೆಳಕಿಗೆ ಬಂದಿದೆ.