ನವದೆಹಲಿ:ಅಸ್ಸೋಂನ 47 ವಿಧಾನಸಭಾ ಸ್ಥಾನಗಳಿಗೆ ಮೊದಲ ಹಂತದಲ್ಲಿ ನಡೆದ ಮತದಾನ ಮುಕ್ತಾಯಗೊಂಡಿದೆ. ಅಸ್ಸೋಂನಲ್ಲಿ ಸಂಜೆ 6:52 ಗಂಟೆ ವರೆಗೆ ಶೇ.72.46ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇತ್ತೀಚಿನ ಮಾಹಿತಿ ಪ್ರಕಾರ ರುಪೋಹಿಹತ್ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನದ ನಡೆದಿದೆ. ಶೇಕಡಾ 83ರಷ್ಟು ಮತದಾನ ನಡೆದಿದ್ದು, ಸೂಟಿಯಾ ಕ್ಷೇತ್ರದಲ್ಲಿ ಅತೀ ಕಡಿಮೆ ಶೇ.64ರಷ್ಟು ಮತದಾನವಾಗಿದೆ.
ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು. ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ದಿಬ್ರುಗಢ ಜಿಲ್ಲೆಯ ಜೆ ಪಿ ನಗರ ಕ್ಷೇತ್ರದಲ್ಲಿ ಮತ ಚಲಾಯಿಸಿದರು. ಅಸ್ಸೋಂ ಕಾಂಗ್ರೆಸ್ ಮುಖ್ಯಸ್ಥ ರಿಪುನ್ ಬೋರಾ ಅವರು ಗೋಹ್ಪುರ ಜಿಲ್ಲೆಯಲ್ಲಿ ಮತ ಚಲಾಯಿಸಿದ್ದರು.
1,1537 ಮತಗಟ್ಟೆಗಳಲ್ಲಿ 81.09 ಲಕ್ಷ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದರು. ಅಲ್ಲದೆ 47 ಕ್ಷೇತ್ರಗಳಲ್ಲಿ 264 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಲ್ಲದೆ 2ನೇ ಹಂತದ ಮತದಾನ ಪ್ರಕ್ರಿಯೆಯು ಏಪ್ರಿಲ್ 1 ಹಾಗೂ 6ರಂದು ನಿಗದಿಯಾಗಿದೆ. ಮೇ 12ಕ್ಕೆ ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ:ಇಂಧನ ಬೆಲೆಗಳ ಏರಿಕೆ.. ಕೇಂದ್ರ ಸರ್ಕಾರಕ್ಕೆ 7 ವರ್ಷದಲ್ಲಿ ಶೇ.556ರಷ್ಟು ಆದಾಯ ಹೆಚ್ಚಳ..