ಗುವಾಹಟಿ(ಅಸ್ಸೋಂ):ಅಸ್ಸೋಂ ಮತ್ತು ತ್ರಿಪುರಾದಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಕೂಟದ ಪಾಲುದಾರರು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪಬಿತ್ರಾ ಮಾರ್ಗರಿಟಾ ಅಸ್ಸೋಂನ ಎರಡು ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ಗೆದ್ದಿದ್ದಾರೆ.
ಮೈತ್ರಿಕೂಟದ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (UPPL) ನಾಯಕ ರುಂಗ್ವ್ರಾ ನರ್ಜಾರಿ ದಿಸ್ಪುರದಲ್ಲಿ ಮೇಲ್ಮನೆಯ ಎರಡನೇ ಸ್ಥಾನವನ್ನು ಗೆದ್ದಿದ್ದಾರೆ. ಅದೇ ರೀತಿ ಬಿಜೆಪಿಯ ಡಾ.ಮಾಣಿಕ್ ಸಹಾ ತ್ರಿಪುರಾದಿಂದ ಏಕೈಕ ರಾಜ್ಯಸಭಾ ಸ್ಥಾನವನ್ನು ಗೆದ್ದಿದ್ದಾರೆ. ಸಹಾ ಅವರು ಸಿಪಿಐಎಂ ಅಭ್ಯರ್ಥಿ ಭಾನು ಲಾಲ್ ಸಹಾ ಅವರನ್ನು ಸೋಲಿಸಿದರು.
ಕಾಂಗ್ರೆಸ್‌ನ ರಾನೀ ನಾರಾ ಮತ್ತು ರಿಪುನ್ ಬೋರಾ ಅವರ ರಾಜ್ಯಸಭಾ ಅವಧಿ ಏ.2ರಂದು ಮುಗಿಯಲಿದೆ. ಈ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು. ಬಿಜೆಪಿ ಅಭ್ಯರ್ಥಿ ಪಬಿತ್ರಾ ಮಾರ್ಗರಿಟಾ 46 ಮತಗಳನ್ನು ಪಡೆದ್ರೆ, ಯುಪಿಪಿಎಲ್‌ನ ರ್ವಾಂಗ್ವಾರಾ ನರ್ಜಾರಿ 44 ಮತಗಳನ್ನು ಪಡೆದರು. ಕಾಂಗ್ರೆಸ್‌ನ ಓರ್ವ ಅಭ್ಯರ್ಥಿ ರಿಪುನ್ ಬೋರಾ ಮಾತ್ರ 35 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಶಾಸಕ ಸಿದ್ದಿಕ್ ಅಹಮದ್ ಮತಪತ್ರದಲ್ಲಿ 'ಒಂದು' ಎಂದು ಬರೆದಿದ್ದರಿಂದ ಅವರ ಮತ ರದ್ದಾಗಿದೆ.