ಕರ್ನಾಟಕ

karnataka

ETV Bharat / bharat

ಅಧಿಕಾರಿಗಳ ಮೇಲೆ ದಾಳಿ ಮಾಡಿ ಇವಿಎಂ ಹೊತ್ತೊಯ್ದ ದುಷ್ಕರ್ಮಿಗಳು - Assam Poll

ಅಸ್ಸೋಂನ ಜೆಂಗ್ರೈಮುಖ್ ಮತಗಟ್ಟೆ ಸಂಖ್ಯೆ ನಂ. 142 ರಿಂದ 139 ನಂ. ಮತದಾನ ಕೇಂದ್ರದಲ್ಲಿ ದುಷ್ಕರ್ಮಿಗಳು ಎರಡು ಖಾಲಿ ಇವಿಎಂ ಪೆಟ್ಟಿಗೆಗಳನ್ನು ಹೊತ್ತೊಯ್ದ ಘಟನೆ ನಡೆದಿದೆ.

Assam Poll : Miscreants vandalized WagonR carrying EVM
ಇವಿಎಂ ಪೆಟ್ಟಿಗೆ ಹೊತ್ಯೊಯ್ದ ದುಷ್ಕರ್ಮಿಗಳು

By

Published : Mar 28, 2021, 11:27 AM IST

ದಿಸ್ಪುರ (ಅಸ್ಸೋಂ) : ಅಸ್ಸೋಂನಲ್ಲಿ ವಿಧಾನಸಭಾ ಚುನಾವಣೆ ಕಾವೇರಿದೆ. ಇದರ ಜೊತೆ ರಾಜ್ಯದಲ್ಲಿ ಹಿಂಸಾಚಾರ ಪ್ರಕರಣಗಳು ಕೂಡಾ ಹೆಚ್ಚಾಗಿವೆ.

ಇವಿಎಂ ಪೆಟ್ಟಿಗೆ ಹೊತ್ತೊಯ್ದ ದುಷ್ಕರ್ಮಿಗಳು

ಅಸ್ಸೋಂನ ಜೆಂಗ್ರೈಮುಖ್ ಮತಗಟ್ಟೆ ಸಂಖ್ಯೆ ನಂ. 142 ರಿಂದ 139 ನಂ. ಮತದಾನ ಕೇಂದ್ರದಲ್ಲಿ ದುಷ್ಕರ್ಮಿಗಳು ಅಧಿಕಾರಿಗಳ ಮೇಲೆ ದಾಳಿ ಮಾಡಿ ಎರಡು ಖಾಲಿ ಇವಿಎಂ ಪೆಟ್ಟಿಗೆಯನ್ನ ಹೊತ್ತೊಯ್ದಿದ್ದು, ಒಂದು ಕರ್ತವ್ಯ ನಿರತ ವಾಹನವನ್ನು ಧ್ವಂಸಗೊಳಿಸಿದ್ದಾರೆ. ಈ ಮತಗಟ್ಟೆಯ ಭದ್ರತೆಗೆ ವಾಹನ ಚಾಲಕ ಸೇರಿದಂತೆ, ಇಬ್ಬರು ಸೆಕ್ಟರ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು.

ಓದಿ : ಬಿಜೆಪಿ ಶಾಸಕನ ಶರ್ಟ್​ ಹರಿದು ಹಲ್ಲೆಗೈದ ಪ್ರಕರಣ: 300 ಜನರ ವಿರುದ್ಧ ಎಫ್​ಐಆರ್​

ಮತ್ತೊಂದು ಘಟನೆಯಲ್ಲಿ ಕ್ರಿಮ್‌ಗಂಜ್ ಜಿಲ್ಲೆಯಲ್ಲಿ ರಾಷ್ಟ್ರೀಯ ಸಮತಾ ದಳದ ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಣವ್ ಕುಮಾರ್ ರಾಯ್ ಅವರು ಎಜಿಪಿ ಅಭ್ಯರ್ಥಿ ಅಜೀಜ್ ಅಹ್ಮದ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಅಜೀಜ್ ಅಹ್ಮದ್ ನೀಲಂ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ABOUT THE AUTHOR

...view details