ಅಸ್ಸೋಂ: ಬಟಾದ್ರವ ಪೊಲೀಸ್ ಠಾಣೆಯನ್ನು ಸುಟ್ಟ ಪ್ರಕರಣದಲ್ಲಿ ಜಿಹಾದಿ ಭಾಗಿಯಾಗಿದ್ದಾರೆ ಎಂದು ಅಸ್ಸೋಂ ಪೊಲೀಸರು ಶಂಕಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್ಐಟಿ ರಚಿಸಿದ್ದು, ಇಂದು ಬೆಳಗ್ಗೆ ವಿಶೇಷ ಡಿಜಿಪಿ ಜಿ.ಪಿ.ಶಿಂಗ್ ಬಟದ್ರವ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.
ಠಾಣೆ ಸುಟ್ಟ ಪ್ರಕರಣದ ಬಗ್ಗೆ ನಾಗಾವ್ನ ಎಸ್ಪಿ ಮತ್ತು ಪೊಲೀಸ್ ಅಧಿಕಾರಿಯೊಂದಿಗೆ ಡಿಜಿಪಿ ಜಿ.ಪಿ.ಶಿಂಗ್ ಚರ್ಚಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ 20 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ.