ಕರೀಂಗಂಜ್ (ಅಸ್ಸೋಂ):ಇತ್ತೀಚೆಗೆ ಅಪಹರಣ ಪ್ರಕರಣದ ತನಿಖೆ ನಡೆಸುತ್ತಿರುವಾಗ ಅಸ್ಸೋಂನ ಕರೀಮ್‌ಗಂಜ್ ಜಿಲ್ಲೆಯ ಪೊಲೀಸರು ಭಾರತ ಮತ್ತು ಬಾಂಗ್ಲಾದೇಶವನ್ನು ಸಂಪರ್ಕಿಸುವ ರಹಸ್ಯ ಸುರಂಗವನ್ನು ಪತ್ತೆ ಹಚ್ಚಿದ್ದಾರೆ.
ಇಂಡೋ-ಬಾಂಗ್ಲಾ ಗಡಿಯ ಬೇಲಿ ಕೆಳಗೆ ಇರುವ ಈ ಸುರಂಗವನ್ನು ಒಳನುಸುಳುವವರು, ಅಪರಾಧಿಗಳು ಮತ್ತು ಜಾನುವಾರು ಕಳ್ಳಸಾಗಾಣಿಕೆದಾರರು ಬಳಸುತ್ತಿರಬಹುದು ಎಂದು ಶಂಕಿಸಲಾಗಿದೆ.