ಕರ್ನಾಟಕ

karnataka

ETV Bharat / bharat

ಗುವಾಹಟಿಯಲ್ಲಿ ಈಶಾನ್ಯದ ಮೊದಲ ಏಮ್ಸ್ ಉದ್ಘಾಟಿಸಿದ ಪ್ರಧಾನಿ ಮೋದಿ - ವಿಶ್ವದರ್ಜೆಯ ಆರೋಗ್ಯ ಸೌಲಭ್ಯ

ಪ್ರಧಾನಿ ನರೇಂದ್ರ ಮೋದಿ ಅವರಿಂದು ಗುವಾಹಟಿಯಲ್ಲಿ ಈಶಾನ್ಯದಲ್ಲಿಯೇ ಮೊದಲ ಆಲ್ ಇಂಡಿಯಾ ಇನ್ಸ್​ನ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್​ ಉದ್ಘಾಟಿಸಿದ್ದಾರೆ.

ಗುವಾಹಟಿಯಲ್ಲಿ ಈಶಾನ್ಯದ ಮೊದಲ ಏಮ್ಸ್ ಉದ್ಘಾಟಿಸಿದ ಪ್ರಧಾನಿ ಮೋದಿ
ಗುವಾಹಟಿಯಲ್ಲಿ ಈಶಾನ್ಯದ ಮೊದಲ ಏಮ್ಸ್ ಉದ್ಘಾಟಿಸಿದ ಪ್ರಧಾನಿ ಮೋದಿ

By

Published : Apr 14, 2023, 10:33 PM IST

ಗುವಾಹಟಿ (ಅಸ್ಸಾಂ):ಪ್ರಧಾನಿ ನರೇಂದ್ರ ಮೋದಿ ಅವರಿಂದು ಗುವಾಹಟಿಗೆ ಆಗಮಿಸಿ ಈಶಾನ್ಯದಲ್ಲಿಯೇ ಮೊದಲ ಏಮ್ಸ್​ ಉದ್ಘಾಟಿಸಿದರು. ಆಸ್ಪತ್ರೆಯ ಶಂಕುಸ್ಥಾಪನೆಯನ್ನು ಮೇ 2017ರಲ್ಲಿ ಪ್ರಧಾನಿ ನೆರವೇರಿಸಿದ್ದರು. 1,123 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹಾಗೆಯೇ ರಾಜ್ಯದ ವಸಂತೋತ್ಸವ 'ರೊಂಗಾಲಿ ಬಿಹು'ದ ಮೊದಲ ದಿನದಂದು 14,300 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಗವರ್ನರ್ ಗುಲಾಬ್ ಚಂದ್ ಕಟಾರಿಯಾ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಮ್ರೂಪ್ (ಗ್ರಾಮೀಣ) ಜಿಲ್ಲೆಯ ಚಾಂಗ್ಸಾರಿಯಲ್ಲಿರುವ ಗುವಾಹಟಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ನಲ್ಲಿ ದಿನದ ಮೊದಲ ಕಾರ್ಯಕ್ರಮಕ್ಕೆ ಹೊರಡುವ ಮೊದಲು ಪ್ರಧಾನಿಯವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ನಲ್ಬರಿ, ನಾಗಾಂವ್ ಮತ್ತು ಕೊಕ್ರಜಾರ್‌ನಲ್ಲಿ ಮೂರು ವೈದ್ಯಕೀಯ ಕಾಲೇಜುಗಳನ್ನು ಇಂದು ಲೋಕಾರ್ಪಣೆ ಮಾಡಿದ್ದಾರೆ.

ಏಮ್ಸ್​ ಜನರ ಆರೋಗ್ಯದ ಗುಣಮಟ್ಟ ಹೆಚ್ಚಿಸುತ್ತದೆ: ಗುವಾಹಟಿಯಲ್ಲಿರುವ ಏಮ್ಸ್ ಅಸ್ಸಾಂನ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ. ಇಡೀ ಈಶಾನ್ಯದ ಜನತೆಯ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಇದು ಗುಣಮಟ್ಟದ ಆರೋಗ್ಯ ಸೇವೆಯನ್ನು ಇನ್ನಷ್ಟು ಸುಲಭವಾಗಿಸುತ್ತದೆ ಎಂದು ಮೋದಿ ಉದ್ಘಾಟನಾ ಕಾರ್ಯಕ್ರಮದ ಕುರಿತು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಪಿಎಂಒ ಪ್ರಕಾರ, ಗುವಾಹಟಿಯ ಏಮ್ಸ್‌ನ ಕಾರ್ಯಾಚರಣೆಯು ಅಸ್ಸಾಂ ರಾಜ್ಯ ಮತ್ತು ಇಡೀ ಈಶಾನ್ಯ ಪ್ರದೇಶಕ್ಕೆ ಮಹತ್ವದ ಸಂದರ್ಭವನ್ನು ಗುರುತಿಸುತ್ತದೆ. ಇದನ್ನು 'ದೇಶದ್ಯಾಂತ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಪ್ರಧಾನ ಮಂತ್ರಿಯ ಬದ್ಧತೆಯ ಸಾಕ್ಷಿ' ಎಂದು ಬಣ್ಣಿಸಿದೆ.

ಏಮ್ಸ್ ಗುವಾಹಟಿಯು 30 ಆಯುಷ್ ಹಾಸಿಗೆಗಳು ಸೇರಿದಂತೆ 750 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿರುವ ಅತ್ಯಾಧುನಿಕ ಆಸ್ಪತ್ರೆಯಾಗಿದೆ. ಆಸ್ಪತ್ರೆಯು ವಾರ್ಷಿಕ 100 ಎಂಬಿಬಿಎಸ್ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತದೆ. ಆಸ್ಪತ್ರೆಯು ಈಶಾನ್ಯದ ಜನರಿಗೆ ವಿಶ್ವದರ್ಜೆಯ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ :ಸಾಲ ಪಡೆಯುವಲ್ಲಿ ಅಸ್ಸೋಂ ಸರ್ಕಾರದ ದಾಖಲೆ: ಇಂದು ಅಸ್ಸೋಂಗೆ ಪ್ರಧಾನಿ ಮೋದಿ ಭೇಟಿ

ABOUT THE AUTHOR

...view details