ಗುವಾಹಟಿ (ಅಸ್ಸೋಂ ): ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಭೀಕರವಾಗಿದೆ. 16 ಜಿಲ್ಲೆಗಳಲ್ಲಿ ಸುಮಾರು 4.89 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಲ್ಬರಿ ಜಿಲ್ಲೆಯಲ್ಲಿ ಪ್ರವಾಹದ ನೀರಿನಲ್ಲಿ ಮುಳುಗಿ ಒಬ್ಬರು ಸಾವನ್ನಪ್ಪಿದ್ದಾರೆ. ಅಸ್ಸೋಂ ಪ್ರವಾಹದಲ್ಲಿ ಒಟ್ಟು ಸಾವಿನ ಸಂಖ್ಯೆ 2ಕ್ಕೇರಿದೆ.
ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ವರದಿಯ ಪ್ರಕಾರ "ಬಜಾಲಿ ಜಿಲ್ಲೆಯಲ್ಲಿ ಸುಮಾರು 2.67 ಲಕ್ಷ ಜನರು ಬಾಧಿತರಾಗಿದ್ದಾರೆ. ನಲ್ಬರಿಯಲ್ಲಿ 80,061 ಜನರು, ಬಾರ್ಪೇಟಾದಲ್ಲಿ 73,233 ಜನರು, ಲಖಿಂಪುರದಲ್ಲಿ 22,577 ಜನರು, ದರ್ಂಗ್‌ನಲ್ಲಿ 14,5813 ಜನರು, 14,5814180, ತಮುಲ್ಪುರದಲ್ಲಿ ಜನರು, ಬಕ್ಸಾದಲ್ಲಿ 7,282 ಜನರು, ಗೋಲ್ಪಾರಾ ಜಿಲ್ಲೆಯಲ್ಲಿ 4,750 ಜನರು ಸಂತ್ರಸ್ತರಾಗಿದ್ದಾರೆ. ಪ್ರವಾಹದ ನೀರಲ್ಲಿ 10782.80 ಹೆಕ್ಟೇರ್ ಬೆಳೆ ನಾಶವಾಗಿದೆ.
ರಾಜ್ಯದ ಬಜಾಲಿ, ಬಕ್ಸಾ, ಬಾರ್ಪೇಟಾ, ಬಿಸ್ವನಾಥ್, ಬೊಂಗೈಗಾಂವ್, ಚಿರಾಂಗ್, ದರ್ರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ, ಗೋಲ್‌ಪಾರಾ, ಗೋಲಾಘಾಟ್, ಕಾಮ್ರೂಪ್, ಕೊಕ್ರಜಾರ್, ಲಖಿಂಪುರ, ನಾಗಾಂವ್, ನಲ್ಬರಿ, ತಾಮುಲ್‌ಪುರ ಜಿಲ್ಲೆ 54 ಕಂದಾಯ ವೃತ್ತಗಳ ವ್ಯಾಪ್ತಿಯ 1,538 ಗ್ರಾಮಗಳು ಬಾಧಿತವಾಗಿವೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಬ್ರಹ್ಮಪುತ್ರ:ಧಾರಾಕಾರ ಮಳೆಯ ಬಳಿಕ ಬ್ರಹ್ಮಪುತ್ರ ನದಿಯ ನೀರಿನ ಮಟ್ಟ ಜೋರ್ಹತ್ ಜಿಲ್ಲೆಯ ನೇಮತಿಘಾಟ್‌ನಲ್ಲಿ ಮತ್ತು ಧುಬ್ರಿ, ಎನ್‌ಎಚ್ ರೋಡ್ ಕ್ರಾಸಿಂಗ್‌ನಲ್ಲಿ ಮಾನಸ್ ನದಿ, ಎನ್‌ಟಿ ರಸ್ತೆ ಕ್ರಾಸಿಂಗ್‌ನಲ್ಲಿ ಪಗ್ಲಾಡಿಯಾ ನದಿ, ಎನ್‌ಎಚ್ ರಸ್ತೆ ಕ್ರಾಸಿಂಗ್‌ನಲ್ಲಿ ಪುತಿಮರಿ ನದಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಪರಿಹಾರ ವಿತರಣಾ ಕೇಂದ್ರ ಸ್ಥಾಪನೆ:ಜಿಲ್ಲಾಡಳಿತ 140 ಪರಿಹಾರ ಶಿಬಿರಗಳನ್ನು ಮತ್ತು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 75 ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದೆ. 35,142 ಜನರು ಈ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಮತ್ತೊಂದೆಡೆ ಇನ್ನೂ ಅನೇಕರು ರಸ್ತೆಗಳು, ಎತ್ತರದ ಪ್ರದೇಶಗಳು ಮತ್ತು ಒಡ್ಡುಗಳಲ್ಲಿ ಆಶ್ರಯ ಪಡೆದಿದ್ದಾರೆ.