ನವದೆಹಲಿ: ಅಸ್ಸೋಂನಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಾದ ಎಜಿಪಿ ಮತ್ತು ಯುಪಿಪಿಎಲ್ 86 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತಮ್ಮ ಸ್ಥಾನ ಹಂಚಿಕೆ ಕಾರ್ಯವನ್ನು ಅಂತಿಮಗೊಳಿಸಿದ್ದು, ಮೊದಲ ಮತ್ತು ಎರಡನೇ ಹಂತದಲ್ಲಿ ಹೆಚ್ಚಾಗಿ ಮತದಾನ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ರಂಜಿತ್ ದಾಸ್ ಗುರುವಾರ ರಾತ್ರಿ ಹೇಳಿದರು.
ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು (ಎಜಿಪಿ) ಅಸ್ಸೋಂ ಗಣ ಪರಿಷತ್ ಮತ್ತು (ಯುಪಿಪಿಎಲ್) ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಸೀಟು ಹಂಚಿಕೆ ವ್ಯವಸ್ಥೆಯನ್ನು ಅಂತಿಮಗೊಳಿಸಿವೆ. ಪ್ರತಿ ಪಕ್ಷವು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬುವುದನ್ನು ನಾನು ಈಗ ಬಹಿರಂಗಪಡಿಸುತ್ತಿಲ್ಲ. ಚುನಾವಣೆಗೆ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ. ಸದ್ಯಕ್ಕೆ ಪಕ್ಷವು 12 ಸ್ಥಾನಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ ಎಂದು ಅವರು ಹೇಳಿದರು.