ಗುವಾಹಟಿ (ಅಸ್ಸೋಂ) :ಜಾನುವಾರುಗಳ ಸಂರಕ್ಷಣೆಗೆ ಇನ್ನಷ್ಟು ಕಾನೂನು ಬಲ ತರಲು ಅಸ್ಸೋಂ ಸರ್ಕಾರ ಜಾನುವಾರುಗಳ ಸಂರಕ್ಷಣಾ (ತಿದ್ದುಪಡಿ) ಮಸೂದೆ 2021 ಅನ್ನು ವಿಧಾನಸಭೆಯಲ್ಲಿ ಗುರುವಾರ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.
ತಿದ್ದುಪಡಿ ಮಸೂದೆಯಲ್ಲಿ ಕೃಷಿ ಉದ್ದೇಶಗಳಿಗೆ ಜಾನುವಾರುಗಳ ಬಳಕೆಗೆ ಅವಕಾಶ ನೀಡಿದೆ. ಅಲ್ಲದೇ, ಪ್ರಮುಖವಾಗಿ ಜಾನುವಾರುಗಳ ಕಳ್ಳಸಾಗಣೆದಾರರಿಗೆ ಕಠಿಣ ಶಿಕ್ಷೆ ವಿಧಿಸುವುದನ್ನು ಇದು ಖಚಿತಪಡಿಸುತ್ತದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಪಶುಗಳ ಕಳ್ಳಸಾಗಣೆ ಮತ್ತು ಹರಣವನ್ನು ಹತ್ತಿಕ್ಕಲು ಸರ್ಕಾರ ಜಾನುವಾರುಗಳ ಸಂರಕ್ಷಣೆ ಕಾಯ್ದೆ-1950ಕ್ಕೆ ತಿದ್ದುಪಡಿ ತಂದು, ಜಾನುವಾರುಗಳ ಸಂರಕ್ಷಣಾ(ತಿದ್ದುಪಡಿ) ಕಾಯ್ದೆ 2021 ಅನ್ನು ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಳ್ಳಲಾಗಿದೆ.