ಕರ್ನಾಟಕ

karnataka

ETV Bharat / bharat

ವಿಷಪೂರಿತ ಅಣಬೆ ಸೇವನೆ: ಒಂದೇ ವಾರದಲ್ಲಿ 13 ಮಂದಿ ಸಾವು, 39 ಜನರು ಆಸ್ಪತ್ರೆಗೆ ದಾಖಲು - ಅಸ್ಸೋಂನಲ್ಲಿ 13 ಜನರು ದುರ್ಮರಣ

ವಿಷಪೂರಿತ ಅಣಬೆ ಸೇವನೆ ಮಾಡಿರುವ ಪರಿಣಾಮ ಅಸ್ಸೋಂನ ವಿವಿಧ ಜಿಲ್ಲೆಗಳಲ್ಲಿ ಕೇವಲ ಒಂದೇ ವಾರದ ಅಂತರದಲ್ಲಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

poisonous mushroom
poisonous mushroom

By

Published : Apr 13, 2022, 9:49 PM IST

ದಿಬ್ರುಗಢ(ಅಸ್ಸೋಂ): ಕಾಡಿನಲ್ಲಿ ಬೆಳೆಯುವ ವಿಷಕಾರಿ ಅಣಬೆ ಸೇವನೆ ಮಾಡಿರುವ ಪರಿಣಾಮ ಒಂದೇ ವಾರದ ಅಂತರದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. 39 ಜನರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಅಸ್ಸೋಂನ ದಿಬ್ರುಗಢದಲ್ಲಿ ಈ ಘಟನೆ ನಡೆದಿದೆ.

ವಿಷಪೂರಿತ ಅಣಬೆ ಸೇವನೆ ಮಾಡಿರುವ ಪರಿಣಾಮ ಎಲ್ಲರೂ ಮೂತ್ರಪಿಂಡ ಮತ್ತು ಯಕೃತ್ತಿ ತೊಂದರೆಯಿಂದ ಬಳಲುತ್ತಿದ್ದು, ಇಲ್ಲಿಯವರೆಗೆ 13 ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆಂದು ವೈದ್ಯಾಧಿಕಾರಿ ಡಾ. ಪ್ರಶಾಂತ್​ ದಹಿಂಗಿಯಾ ತಿಳಿಸಿದ್ದಾರೆ. ಅಸ್ಸೋಂನ ತಿನ್ಸುಕಿಯಾ, ಚರೈಡಿಯೊ,ಶಿವಸಾಗರ್​ ಮತ್ತು ದಿಬ್ರುಗಢ ಜಿಲ್ಲೆಯ ಜನರು ಸಾವನ್ನಪ್ಪಿದ್ದು, ಇದರಲ್ಲಿ ಹೆಚ್ಚಿನವರು ಟೀ ಗಾರ್ಡನ್​ಗಳಲ್ಲಿ ಕೆಲಸ ಮಾಡ್ತಿದ್ದರು.

ಬೇಸಿಗೆ ಸಂದರ್ಭದಲ್ಲಿ ಅಸ್ಸೋಂನ ವಿವಿಧ ಪ್ರದೇಶದ ಕಾಡುಗಳಲ್ಲಿ ಹೆಚ್ಚಾಗಿ ಅಣಬೆ ಬೆಳೆಯುತ್ತವೆ. ಅವುಗಳನ್ನು ಸೇವಿಸಿರುವ ಪರಿಣಾಮ ಎಲ್ಲರೂ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಇವರಲ್ಲಿ 13 ಜನರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details