ಕರ್ನಾಟಕ

karnataka

ETV Bharat / bharat

ಅಸ್ಸೋಂ ಬಿಜೆಪಿ ಸಂಸದರ ಮನೆಯಲ್ಲಿ ಬಾಲಕನ ಮೃತದೇಹ ಪತ್ತೆ - ಅಸ್ಸೋಂ ಬಿಜೆಪಿ ಸಂಸದರ ಮನೆಯಲ್ಲಿ ಬಾಲಕನ ಶವ ಪತ್ತೆ

ಅಸ್ಸೋಂನ ಸಿಲ್ಚಾರ್​ನಲ್ಲಿ ಬಿಜೆಪಿ ಸಂಸದ ರಾಜದೀಪ್ ರಾಯ್ ಅವರ ಮನೆಯಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.

assam-10-year-old-boy-found-hanging-inside-bjp-mp-rajdeep-roys-house-in-silchar
ಅಸ್ಸೋಂ ಬಿಜೆಪಿ ಸಂಸದರ ಮನೆಯಲ್ಲಿ ಬಾಲಕನ ಮೃತದೇಹ ಪತ್ತೆ

By ETV Bharat Karnataka Team

Published : Aug 27, 2023, 3:47 PM IST

ಸಿಲ್ಚಾರ್​ (ಅಸ್ಸೋಂ):ಬಿಜೆಪಿ ಸಂಸದರೊಬ್ಬರ ಮನೆಯಲ್ಲಿ 10 ವರ್ಷದ ಬಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಈಶಾನ್ಯ ರಾಜ್ಯ ಅಸ್ಸೋಂನ ಸಿಲ್ಚಾರ್​ನಲ್ಲಿ ಶನಿವಾರ ನಡೆದಿದೆ. ಮೃತ ಬಾಲಕನನ್ನು ಮನೆಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಮಗ ಎಂದು ಗುರುತಿಸಲಾಗಿದೆ.

ಸಿಲ್ಚಾರ್‌ ಕ್ಷೇತ್ರದ ಬಿಜೆಪಿ ಸಂಸದ ರಾಜದೀಪ್ ರಾಯ್ ಅವರ ಮನೆಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಸಂಸದರು ಪ್ರತಿಕ್ರಿಯಿಸಿ, ''ನಾನು ಶನಿವಾರ ಪಕ್ಷದ ಕಚೇರಿಯಲ್ಲಿದ್ದಾಗ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತು. ನನ್ನ ಸಹೋದ್ಯೋಗಿಯೊಬ್ಬರು ಕರೆ ಮಾಡಿ ನನ್ನ ನಿವಾಸದಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿಸಿದರು. ಹೀಗಾಗಿ ನಾನು ತಕ್ಷಣವೇ ಮನೆಗೆ ಧಾವಿಸಿ ನೋಡಿದಾಗ ಬಾಲಕ ನೇಣು ಬಿಗಿದ ಸ್ಥಿತಿಯಲ್ಲಿದ್ದ'' ಎಂದು ಹೇಳಿದ್ದಾರೆ.

''ಕೂಡಲೇ ಈ ಕುರಿತು ನಾನು ಪೊಲೀಸರಿಗೆ ಮಾಹಿತಿ ನೀಡಿದೆ. ಸ್ಥಳಕ್ಕೆ ಬಂದು ಪೊಲೀಸರು ನನ್ನ ಮನೆಯಿಂದ ಬಾಲಕನನ್ನು ಹೊರತೆಗೆದು ಸಿಲ್ಚಾರ್ ವೈದ್ಯಕೀಯ ಕಾಲೇಜಿಗೆ ಸಾಗಿಸಿದರು. ಅಷ್ಟರಲ್ಲೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು'' ಎಂದು ಸಂಸದ ರಾಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಮೃತ ಬಾಲಕ ಹಲವಾರು ವರ್ಷಗಳಿಂದ ಕುಟುಂಬ ಸದಸ್ಯರೊಂದಿಗೆ ನಮ್ಮ ಮನೆಯಲ್ಲಿ ವಾಸಿಸುತ್ತಿದ್ದ. ಬಾಲಕನ ತಾಯಿ ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು'' ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Assam Shocker! ಮದರಸಾ ಹಾಸ್ಟೆಲ್ ಕೊಠಡಿಯಲ್ಲಿ ಶಿರಚ್ಛೇದಗೊಳಿಸಿದ ವಿದ್ಯಾರ್ಥಿಯ ಶವ ಪತ್ತೆ!

ಅಲ್ಲದೇ, ''ಬಾಲಕನ ಅಕ್ಕ ಮನೆಯಲ್ಲಿ ಇರುತ್ತಿದ್ದಳು. ಎಂದಿನಂತೆ ಊಟ ಮಾಡಿ ಬಾಲಕನ ತಾಯಿ ಮತ್ತು ಸಹೋದರಿ ಶನಿವಾರ ಮಾರುಕಟ್ಟೆಗೆ ಹೋಗಿದ್ದರು. ನಂತರ ಮನೆಗೆ ಹಿಂದಿರುಗಿದ ಅವರು ಬಾಗಿಲು ತಟ್ಟಿದ್ದಾರೆ. ಆದರೆ, ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಇತರ ವ್ಯಕ್ತಿಗಳು ದೌಡಾಯಿಸಿ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಆಗ ಬಾಲಕ ನೇಣು ಬಿಗಿದುಕೊಂಡಿದ್ದು ಬೆಳಕಿಗೆ ಬಂದಿದೆ. ಸದ್ಯ ಬಾಲಕನ ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ'' ಎಂದು ಸಂಸದ ರಾಜದೀಪ್ ರಾಯ್ ತಿಳಿಸಿದ್ದಾರೆ.

ಇದೇ ತಿಂಗಳ 6ರಂದು ಅಸ್ಸೋಂನ ಕಾಮ್ರೂಪ್​ ಜಿಲ್ಲೆಯಲ್ಲಿ ಇಬ್ಬರು ಯುವತಿಯರ ಮೃತದೇಹಗಳು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಲ್ಲಿ ಪತ್ತೆಯಾಗಿದ್ದವು. ಇಲ್ಲಿನ ತುಳಸಿಬರಿ ಪ್ರದೇಶದಲ್ಲಿ 19 ವರ್ಷ ಹಾಗೂ 17 ವರ್ಷದ ಯುವತಿಯರ ಶವಗಳು ಏಕಕಾಲಕ್ಕೆ ಪ್ರತ್ಯೇಕ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಯುವತಿಯರು ಅತ್ಯಾಚಾರಕ್ಕೊಳಗಾದ ನಂತರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆಯೂ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:Assam crime: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವತಿಯರ ಶವ ಪತ್ತೆ: ಅತ್ಯಾಚಾರ ಶಂಕೆ

ABOUT THE AUTHOR

...view details