ಕರ್ನಾಟಕ

karnataka

ETV Bharat / bharat

World Lion Day: ಕಾಡಿನ ರಾಜನ ಸಂರಕ್ಷಣೆಯಲ್ಲಿ ಭಾರತದ ಪಾತ್ರ ಅಪಾರ - Gir latest News

1911 ರಿಂದ ಗಿರ್‌ನಲ್ಲಿ ಸಿಂಹಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಸದ್ಯ ಗಿರ್ ಕಾಡಿನಲ್ಲಿ 674 ಸಿಂಹಗಳು ವಾಸಿಸುತ್ತಿವೆ ಎಂದು ವರದಿಯೊಂದು ತಿಳಿಸಿದೆ. ಸಿಂಹಗಳ ನಿರಂತರ ಬೆಳವಣಿಗೆಯ ಹಿಂದೆ ಅರಣ್ಯ ಪ್ರದೇಶದ ಸಂರಕ್ಷಣೆ ಕೂಡ ಬಹಳ ಮುಖ್ಯ. 1990 ರಲ್ಲಿ, 284 ಸಿಂಹಗಳು 300 ಚದರ್​ ಕಿ.ಮೀ. ಪ್ರದೇಶದ ಕಾಡಿನಲ್ಲಿ ಕಾಣಿಸಿಕೊಂಡರೆ, 2020ರಲ್ಲಿ 674 ಸಿಂಹಗಳು 30,000 ಸಾವಿರ ಚದರ್​ ಕಿ.ಮೀ. ಪ್ರದೇಶದಲ್ಲಿ ವಾಸಿಸುತ್ತಿವೆ. ವಿಶ್ವ ಸಿಂಹದ ದಿನವಾದ ಇಂದು ಅವುಗಳ ಸಂರಕ್ಷಣೆ ಬಗ್ಗೆ ಭಾರತದ ಪಾತ್ರ ಏನು ಎಂಬುದರ ಕುರಿತು ತಿಳಿಯೋಣ.

Asiatic Lion
ಭಾರತದಲ್ಲಿ ಅತಿ ಹೆಚ್ಚು ಕಂಡು ಬರುವ ಏಷ್ಯಾಟಿಕ್​ ಸಿಂಹ

By

Published : Aug 10, 2021, 11:52 AM IST

ಅಹಮದಾಬಾದ್​(ಗುಜರಾತ್):ಪ್ರತೀ ವರ್ಷ ವಿಶ್ವ ಸಿಂಹ ದಿನವನ್ನು ಆಗಸ್ಟ್ 10ರಂದು ಆಚರಿಸಲಾಗುತ್ತದೆ. ಈ ಆಚರಣೆಯ ಮೂಲ ಉದ್ಧೇಶವೆಂದರೆಕ್ಷೀಣಿಸುತ್ತಿರುವ ಸಿಂಹಗಳ ಸಂಖ್ಯೆಯ ಕುರಿತಾಗಿ ಜಾಗೃತಿ ಮೂಡಿಸುವುದು. ಏಷ್ಯಾಟಿಕ್​ ಸಿಂಹವು ಭಾರತದಲ್ಲಿ ಅತಿ ಹೆಚ್ಚು ಗುರುತಿಸಲ್ಪಟ್ಟಿದೆ.ಅರೇಬಿಯಾ ಮತ್ತು ಪರ್ಷಿಯಾದಂತಹ ರಾಷ್ಟ್ರಗಳಲ್ಲಿ ಕಂಡು ಬರುತ್ತಿದ್ದ ಏಷ್ಯಾಟಿಕ್​ ಸಿಂಹಗಳು ಇದೀಗ ಭಾರತದ ಗಿರ್​ ಕಾಡುಗಳಲ್ಲಿ ಮಾತ್ರ ಕಾಣಸಿಗುತ್ತಿವೆ.

ಗಿರ್‌ನಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಳ

ಇಲ್ಲಿನ ಸೌರಾಷ್ಟ್ರದ 9 ಜಿಲ್ಲೆಗಳ, 53 ತಾಲೂಕುಗಳ 30,000 ಚದರ್​ ಕಿ.ಮೀ. ವಿಸ್ತೀರ್ಣದಲ್ಲಿ ಈ ಏಷ್ಯಾಟಿಕ್​ ಸಿಂಹಗಳನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆಫ್ರಿಕಾ ಬಳಿಕ ಸಿಂಹಗಳ ಸಂರಕ್ಷಿತ ಪ್ರದೇಶವೆಂದು ಗಿರ್​ ಕಾಡನ್ನು ಪರಿಗಣಿಸಲಾಗಿದೆ.

ಕಾಡಿನ ರಾಜ ಸಿಂಹ

1910 ಮತ್ತು 1911ರಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆಯು ಕೇವಲ ಎರಡು ಅಂಕಿಗಳಲ್ಲಿತ್ತು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಜುನಾಗಢದ ನವಾಬನು ಸಿಂಹಗಳ ಬೇಟೆಯನ್ನು ನಿಷೇಧಿಸಿದನು. ಹಾಗೆ ನೋಡುವುದಾದರೆ 1911 ರಲ್ಲಿ ಸಿಂಹಗಳನ್ನು ರಕ್ಷಿಸುವ ಯೋಜನೆಯನ್ನು ಮೊದಲು ಆರಂಭಿಸಿದವರು ಜುನಾಗಢದ ನವಾಬರು. ಆನಂತರ, ರಾಜ್ಯ ಅರಣ್ಯ ಇಲಾಖೆಯು ಸಿಂಹಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡವು. ಇದರ ಪ್ರತಿಫಲದಿಂದ ಗಿರ್‌ನಲ್ಲಿ ಇಂದು ಸಿಂಹಗಳ ಸಂಖ್ಯೆಯು ಅತ್ಯಧಿಕವಾಗಿದೆ.

ಕಾಡಿನಲ್ಲಿ ಘರ್ಜನೆ

1911 ರಿಂದ ಗಿರ್‌ನಲ್ಲಿ ಸಿಂಹಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಸದ್ಯ ಗಿರ್ ಕಾಡಿನಲ್ಲಿ 674 ಸಿಂಹಗಳು ವಾಸಿಸುತ್ತಿವೆ ಎಂದು ವರದಿಯೊಂದು ತಿಳಿಸಿದೆ. ಸಿಂಹಗಳ ನಿರಂತರ ಬೆಳವಣಿಗೆಯ ಹಿಂದೆ ಅರಣ್ಯ ಪ್ರದೇಶದ ಸಂರಕ್ಷಣೆ ಕೂಡ ಬಹಳ ಮುಖ್ಯ. 1990 ರಲ್ಲಿ, 284 ಸಿಂಹಗಳು 300 ಚದರ್​ ಕಿ.ಮೀ. ಪ್ರದೇಶದ ಕಾಡಿನಲ್ಲಿ ಕಾಣಿಸಿಕೊಂಡರೆ, 2020ರಲ್ಲಿ 674 ಸಿಂಹಗಳು 30,000 ಸಾವಿರ ಚದರ್​ ಕಿ.ಮೀ. ಪ್ರದೇಶದಲ್ಲಿ ವಾಸಿಸುತ್ತಿವೆ.

ರಾಜ ಗಾಂಭೀರ್ಯದಲ್ಲಿ ಓಡಾಡುತ್ತಿರುವ ಸಿಂಹ

ಸೌರಾಷ್ಟ್ರದ 9 ಜಿಲ್ಲೆಗಳ 53 ತಾಲೂಕುಗಳಲ್ಲಿ ಇಂದು ಸಿಂಹಗಳನ್ನು ಕಾಣಬಹುದು. ಸಿಂಹಗಳ ಆಹಾರ, ನೀರು ಮತ್ತು ಭದ್ರತೆಯ ಕುರಿತು ಅರಣ್ಯ ಇಲಾಖೆ ಕೆಲವು ನಿಖರವಾದ ಕೆಲಸಗಳನ್ನು ಮಾಡುತ್ತಿದೆ. ಆ ಸಮಯದಲ್ಲಿ ಜುನಾಗಢದಲ್ಲಿ ಕಾಣುತ್ತಿದ್ದ ಏಷ್ಯಾಟಿಕ್ ಸಿಂಹಗಳು ಈಗ ಗಡಿಯನ್ನು ದಾಟಿ, ಪಕ್ಕದ ಜಿಲ್ಲೆಗಳಾದ ಅಮ್ರೇಲಿ, ಭಾವನಗರ, ಪೋರಬಂದರ್ ಗಿರ್ ಸೋಮನಾಥ ಜಿಲ್ಲೆಯಲ್ಲಿರುವ ಕಾಡುಗಳಲ್ಲಿಯೂ ಕಾಣ ಸಿಗುತ್ತಿವೆ. ಗಿರ್​ನಲ್ಲಿ ಸಿಂಹಗಳ ನಿರಂತರ ಸಂತಾನೋತ್ಪತ್ತಿ, ಆರೈಕೆ ಹಾಗೂ ಕಾನೂನುಬಾಹಿರ ಅರಣ್ಯನಾಶವನ್ನು ತಡೆಯಲು ಸರ್ಕಾರ ಮತ್ತು ಅರಣ್ಯ ಇಲಾಖೆ ಕೈಗೊಂಡ ಕ್ರಮಗಳು ಉತ್ತಮ ಪ್ರಭಾವ ಬೀರಿವೆ. 1965ರಲ್ಲಿ, ಪ್ರವಾಸಿಗರನ್ನು ಆಕರ್ಷಿಸಲು ಸಾಸನ್ ಸಿಂಗ್ ಸದನ್ ಅನ್ನು ಆರಂಭಿಸಲಾಯಿತು. ಇದರ ಮೂಲಕ ಇಂದು ಸುಮಾರು ಆರು ಲಕ್ಷ ಪ್ರವಾಸಿಗರು ಏಷ್ಯಾಟಿಕ್​ ಸಿಂಹ ಮುಕ್ತವಾಗಿ ಚಲಿಸುವುದನ್ನು ನೋಡಬಹುದು.

ಭಾರತದ ಗಿರ್​ ಕಾಡುಗಳಲ್ಲಿ ಮಾತ್ರ ಕಾಣಸಿಗುವ ಸಿಂಹ

ವರ್ಷಕ್ಕೆ 120 ರಂತೆ ಸಿಂಹಗಳ ಸಾವು ಸಂಭವಿಸುತ್ತಿದೆ. ಇವುಗಳಲ್ಲಿ ಕೆಲ ಸಾವುಗಳು ವಯೋಸಹಜ, ಇನ್ನೂ ಕೆಲವು ಅನಾರೋಗ್ಯದಿಂದ, ಉಳಿದಂತೆ ಜಗಳ ಮತ್ತು ಅಪಘಾತಗಳಿಗೆ ತುತ್ತಾಗಿ ಸಂಭವಿಸುತ್ತಿದೆ. ಗಿರ್​ನಲ್ಲಿ ಪ್ರತಿವರ್ಷ ಸುಮಾರು 150 ಸಿಂಹಗಳು ಸಾಯುತ್ತಿದ್ದರೂ, ಪ್ರತಿ ಐದು ವರ್ಷಗಳಿಗೊಮ್ಮೆ ಸಿಂಹಗಳ ಸಂಖ್ಯೆ ಶೇಕಡಾ 20 ರಿಂದ 30 ರಷ್ಟು ಹೆಚ್ಚುತ್ತಿದೆ. ಸಿಂಹಗಳ ಸಂಖ್ಯೆಯ ನಿರಂತರ ಹೆಚ್ಚಳದಿಂದಾಗಿ ಅರಣ್ಯ ಪ್ರದೇಶದಲ್ಲಿಯೂ ಸಹ ಪ್ರತಿ ಐದು ವರ್ಷಗಳಿಗೊಮ್ಮೆ ಸಿಂಹಗಳ ಆವಾಸ ಸ್ಥಾನವು 20% ಕ್ಕಿಂತ ಹೆಚ್ಚಾಗುತ್ತಿದೆ. ಇಂದು, ಏಷ್ಯಾಟಿಕ್ ಸಿಂಹವು ಗ್ರೇಟರ್ ಗಿರ್‌ನಿಂದ ಪೋರ್​ಬಂದರ್​ ಮತ್ತು ರಾಜ್‌ಕೋಟ್ ಸಮೀಪದ ಚೋಟಿಲಾದ ಕಾಡುಗಳಿಗೆ ದಾಪುಗಾಲಿಡುತ್ತಿದೆ.

ಭಾರತದಲ್ಲಿ ಅತಿ ಹೆಚ್ಚು ಕಂಡು ಬರುವ ಏಷ್ಯಾಟಿಕ್​ ಸಿಂಹ

ಮುಖ್ಯ ಸಂರಕ್ಷಕ ಡಿಟಿ ವಾಸವದ್​ ಈ ಬಗ್ಗೆ ಮಾತನಾಡಿದ್ದು, "ಸಾಸನ್ ಸಿಂಗ್ ದರ್ಶನ್​ನಲ್ಲಿ ಅಂದಾಜು 3 ರಿಂದ 4 ಲಕ್ಷ ಪ್ರವಾಸಿಗರು ಸಿಂಹಗಳನ್ನು ನೋಡಲು ಬರುತ್ತಾರೆ. ಅಂದಾಜು ವರ್ಷ 11 ಕೋಟಿಗೂ ಹೆಚ್ಚು ಆದಾಯ ಇದರಿಂದ ಬರುತ್ತದೆ. ಸಿಂಹಗಳ ಚಲನೆ ಮತ್ತು ಅವುಗಳನ್ನು ಸೂಕ್ಷ್ಮವಾಗಿ ಗಮನಿಸಲು ರೇಡಿಯೋ ಕಾಲರ್, ಜಿಪಿಎಸ್ ಮತ್ತು ಸಿಸಿಟಿವಿಯನ್ನು ಸಹ ಅಳವಡಿಸಲಾಗಿದೆ" ಎಂದು ಹೇಳಿದರು.

ABOUT THE AUTHOR

...view details