ಕರ್ನಾಟಕ

karnataka

ETV Bharat / bharat

ಏಷ್ಯಾದ ಮೊದಲ ಮಹಿಳಾ ಟ್ರಕ್ ಡ್ರೈವರ್ ಇನ್ನಿಲ್ಲ.. ರಾಷ್ಟ್ರಪತಿ ಪ್ರಶಸ್ತಿ ವಿಜೇತೆ ಪಾರ್ವತಿ ಆರ್ಯ ನಿಧನ

ಅಂದಿನ ಕಾಲದಲ್ಲಿ ಹೆಣ್ಣು ಮನೆಯಿಂದ ಹೊರಗೆ ಬಂದ್ರೆ ತಪ್ಪು ಎನ್ನುವ ಸಿದ್ಧಾಂತದ ನಡುವೆ ದಿಟ್ಟತನದಿಂದ ಹೆಜ್ಜೆ ಇಟ್ಟು ಕುಟುಂಬದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಟ್ರಕ್​ ಚಾಲನೆ ಕಲಿತು ಏಷ್ಯಾದ ಮೊದಲ ಮಹಿಳಾ ಟ್ರಕ್ ಡ್ರೈವರ್​ (Asia's first female truck driver) ಎಂಬ ಖ್ಯಾತಿಗೆ ಪಾತ್ರರಾಗಿದ್ದ, ಪಾರ್ವತಿ ಆರ್ಯ ಇಂದು ಅನಾರೋಗ್ಯ ಕಾರಣದಿಂದಾಗಿ ನಿಧನರಾದರು.

asias-first-female-truck-driver-dies-president-also-honored
ಏಷ್ಯಾದ ಮೊದಲ ಮಹಿಳಾ ಟ್ರಕ್ ಡ್ರೈವರ್ ಪಾರ್ವತಿ

By

Published : Nov 19, 2021, 1:20 PM IST

Updated : Nov 19, 2021, 1:50 PM IST

ಮಂದಸೌರ್( ಮಧ್ಯಪ್ರದೇಶ)​ : ಅನಾರೋಗ್ಯದಿಂದ ಬಳಲುತ್ತಿದ್ದ ಏಷ್ಯಾದ ಮೊದಲ ಮಹಿಳಾ ಟ್ರಕ್ ಡ್ರೈವರ್ (Asia's first female truck driver) ಮತ್ತು ರಾಷ್ಟ್ರಪತಿ ಪ್ರಶಸ್ತಿ ವಿಜೇತೆ ಪಾರ್ವತಿ ಆರ್ಯ (Parvati Arya) ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಪಾರ್ವತಿ ಅವರು ಅಸ್ವಸ್ಥರಾಗಿದ್ದರು ಎಂದು ಹೇಳಲಾಗುತ್ತಿದ್ದು, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯ ಹದಗೆಟ್ಟ ಹಿನ್ನೆಲೆ ಮರಣ ಹೊಂದಿದ್ದಾರೆ.

ಅಂದಿನ ರಾಷ್ಟ್ರಪತಿ ಗಿಯಾನಿ ಜೈಲ್​ ಸಿಂಗ್​ ಅವರಿಂದ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ

ಆರ್ಥಿಕ ಸಂಕಷ್ಟಕ್ಕೆ ಟ್ರಕ್​ ಡ್ರೈವರ್​ ಆದ ಪಾರ್ವತಿ​​​​: ಪಾರ್ವತಿ ಆರ್ಯ ಅವರ ತಂದೆ ಮಂಡ್ಸೌರ್ನಲ್ಲಿ ಗುತ್ತಿಗೆದಾರರಾಗಿದ್ದರು. ಅವರ ಮರಣದ ನಂತರ, ಚಿಕ್ಕ ವಯಸ್ಸಿನಲ್ಲಿಯೇ, ಅವರು ಎಂಟು ಸಹೋದರಿಯರು ಮತ್ತು ಮೂವರು ಸಹೋದರರನ್ನು ನೋಡಿಕೊಳ್ಳಬೇಕಾಯಿತು. ಕುಟುಂಬದಲ್ಲಿ ಆರ್ಥಿಕ ಬಿಕ್ಕಟ್ಟು ಇತ್ತು. 11 ಒಡಹುಟ್ಟಿದವರ ಪಾಲನೆ ಅವರಿಗೆ ಮೊದಲ ಆದ್ಯತೆಯಾಗಿತ್ತು. ಇದಕ್ಕಾಗಿ ಟ್ರಕ್ ಓಡಿಸಲು ಕಲಿತರು. 20ನೇ ವಯಸ್ಸಿನಲ್ಲಿಯೇ ಪಾವರ್ತಿ ಅವರಿಗೆ ಮದುವೆ ಕೂಡಾ ಆಯ್ತು.

ಏಷ್ಯಾದ ಮೊದಲ ಮಹಿಳಾ ಟ್ರಕ್ ಡ್ರೈವರ್ ಪಾರ್ವತಿ

ಏಷ್ಯಾದ ಮೊದಲ ಟ್ರಕ್​ ಚಾಲಕಿ: ಆದ್ರೆ ಆ ಸಮಯದಲ್ಲಿ ಮಹಿಳೆಯರು ಡ್ರೈವಿಂಗ್​ ಕಲಿಯುವುದಕ್ಕಿಂತ ಡ್ರೈವಿಂಗ್​ ಲೈಸೆನ್ಸ್​ ಪಡೆಯುವುದು ಕಷ್ಟಕರವಾಗಿತ್ತು. ಆಗ ಇಂದಿರಾ ಗಾಂಧಿ ದೇಶವನ್ನು ನಡೆಸಬಲ್ಲವರಾಗಿದ್ದಾರೆ, ನಾನು ಟ್ರಕ್​ ಓಡಿಸಬಹುದಲ್ಲ ಎಂದು ಹೇಳಿದ್ದರು. ನಂತರ RTO ಅಧಿಕಾರಿಗಳಿಗೆ ಮನವರಿಕೆ ಮಾಡಲಾಯಿತು. ಇದರ ನಂತರ, ಅವರು 1978 ರಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದರು. ಈ ಮೂಲಕ ಅವರು ಏಷ್ಯಾದ ಮೊದಲ ಮಹಿಳಾ ಟ್ರಕ್ ಡ್ರೈವರ್ ಆದರು.

ಪಾರ್ವತಿ ಆರ್ಯ

ರಾಜಕೀಯ ಜೀವನ: ಕಾಂಗ್ರೆಸ್‌ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಪಾರ್ವತಿ ಆರ್ಯ ಅವರು ಕಾಂಗ್ರೆಸ್ ಪಕ್ಷದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಮತ್ತು ಸಂಘಟನೆಯ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. 1990 ರಲ್ಲಿ ಸುವಾಸ್ರ ವಿಧಾನಸಭಾ ಕ್ಷೇತ್ರದಲ್ಲಿ ಎಂಎಲ್​ಎ ಚುನಾವಣೆಗೆ ಸ್ಪರ್ಧಿಸಿ ಸೋತರು. ನಂತರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಏಷ್ಯಾದ ಮೊದಲ ಮಹಿಳಾ ಟ್ರಕ್ ಡ್ರೈವರ್ ಪಾರ್ವತಿ ಆರ್ಯ

ಸಾಧನೆಗೆ ಪ್ರಶಸ್ತಿಯ ಗರಿ: ಏಷ್ಯಾದ ಮೊದಲ ಮಹಿಳಾ ಟ್ರಕ್​ ಡ್ರೈವರ್​ ಆಗಿ ಮಾಡಿದ ಸಾಧನೆಗೆ ಗಿನ್ನೆಸ್​ ಬುಕ್​ ಆಪ್​ ವರ್ಲ್ಡ್​ ರೇಕಾರ್ಡ್​ನಲ್ಲಿ ದಾಖಲಾಗಿದೆ. ಅಲ್ಲದೇ, ಅಂದಿನ ರಾಷ್ಟ್ರಪತಿ ಜೈಲ್​ ಸಿಂಗ್​ ಅವರಿಂದ ರಾಷ್ಟ್ರಪತಿ ಪ್ರಶಸ್ತಿಗೆ ಪಡೆದರು. ನವೆಂಬರ್​ 18 ರಂದು ಮಧ್ಯಾಹ್ನ ಪಾರ್ವತಿಯವರ ಅಂತ್ಯ ಸಂಸ್ಕಾರ ನಡೆದಿದೆ.

Last Updated : Nov 19, 2021, 1:50 PM IST

ABOUT THE AUTHOR

...view details