ಕರ್ನಾಟಕ

karnataka

ETV Bharat / bharat

ಏಷ್ಯಾದ ಅತಿದೊಡ್ಡ ಧಾರಾವಿ ಸ್ಲಮ್ ಮರುನಿರ್ಮಾಣ: ಅದಾನಿ ಗ್ರೂಪ್​ನಿಂದ 5 ಸಾವಿರ ಕೋಟಿಯ ಬಿಡ್ - ಅದಾನಿ ಗ್ರೂಪ್‌ನ ರಿಯಲ್ ಎಸ್ಟೇಟ್

ಧಾರಾವಿ ಸ್ಲಂ ಕ್ಲಸ್ಟರ್ ಪುನರಾಭಿವೃದ್ಧಿಗೆ 2004, 2009, 2011 ಮತ್ತು 2016 ರಲ್ಲಿ ಹಲವಾರು ಬಾರಿ ಬಿಡ್‌ಗಳನ್ನು ಕರೆಯಲಾಗಿತ್ತು. ಆ ಸಮಯದಲ್ಲಿ, ಯಾವುದೇ ದೊಡ್ಡ ಕೈಗಾರಿಕಾ ಸಮೂಹ ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ.

ಏಷ್ಯಾದ ಅತಿದೊಡ್ಡ ಧಾರಾವಿ ಸ್ಲಮ್ ಮರುನಿರ್ಮಾಣ: ಅದಾನಿ ಗ್ರೂಪ್​ನಿಂದ 5 ಸಾವಿರ ಕೋಟಿಯ ಬಿಡ್
Asias Biggest Dharavi Slum Redevelopment: Adani Group Bids Rs 5000 Crore

By

Published : Nov 30, 2022, 4:50 PM IST

ಮುಂಬೈ: 557 ಎಕರೆ ಪ್ರದೇಶದಲ್ಲಿ ಹರಡಿರುವ ಏಷ್ಯಾದ ಅತಿದೊಡ್ಡ ಸ್ಲಂ ಕ್ಲಸ್ಟರ್, ಧಾರಾವಿಯನ್ನು ಅದಾನಿ ಗ್ರೂಪ್‌ನ ರಿಯಲ್ ಎಸ್ಟೇಟ್ ಅಂಗವಾದ ಅದಾನಿ ರಿಯಾಲ್ಟಿ ಸಂಸ್ಥೆಯು ಪುನರಾಭಿವೃದ್ಧಿ ಮಾಡಲಿದೆ. ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಧಾರಾವಿ ಕೊಳಗೇರಿ ಪುನರಾಭಿವೃದ್ಧಿ ಯೋಜನೆಗೆ ಗರಿಷ್ಠ 5,000 ಕೋಟಿ ರೂ. ಬಿಡ್ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಇನ್ನೂ ಎರಡು ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸಿದ್ದವು. ನಮನ್ ಗ್ರೂಪ್ 1,700 ಕೋಟಿ ರೂಪಾಯಿಗಳಿಗೆ ಮತ್ತು ಡಿಎಲ್​ಎಫ್​ ಸಮೂಹವು 2,025 ಕೋಟಿ ರೂಪಾಯಿಗಳಿಗೆ ಬಿಡ್ ಸಲ್ಲಿಸಿದ್ದವು.

ಧಾರಾವಿ ಸ್ಲಂ ಕ್ಲಸ್ಟರ್ ಪುನರಾಭಿವೃದ್ಧಿಗೆ 2004, 2009, 2011 ಮತ್ತು 2016 ರಲ್ಲಿ ಹಲವಾರು ಬಾರಿ ಬಿಡ್‌ಗಳನ್ನು ಕರೆಯಲಾಗಿತ್ತು. ಆ ಸಮಯದಲ್ಲಿ, ಯಾವುದೇ ದೊಡ್ಡ ಕೈಗಾರಿಕಾ ಸಮೂಹ ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ. 2018 ರಲ್ಲಿ, ದುಬೈ ಮೂಲದ ಸೆಕಿಲಿಂಕ್ ಕಂಪನಿಯು ಅತಿ ಹೆಚ್ಚು ಬಿಡ್ ಅನ್ನು ಇರಿಸುವುದರೊಂದಿಗೆ ಜಾಗತಿಕ ಮಟ್ಟದಲ್ಲಿ ಧಾರಾವಿ ಪುನರಾಭಿವೃದ್ಧಿ ಯೋಜನೆಗಾಗಿ ಮತ್ತೊಮ್ಮೆ ಟೆಂಡರ್‌ಗಳನ್ನು ಆಹ್ವಾನಿಸಲಾಯಿತು. ಆದಾಗ್ಯೂ, ಅಡ್ವೊಕೇಟ್ ಜನರಲ್ ಅವರ ಶಿಫಾರಸಿನಂತೆ ಅಂದಿನ ಸರ್ಕಾರವು ಅಕ್ಟೋಬರ್ 2020 ರಲ್ಲಿ ಬಿಡ್ ಅನ್ನು ರದ್ದುಗೊಳಿಸಿತು.

ವಸತಿ ಮತ್ತು ವಾಣಿಜ್ಯ ಬಳಕೆಯ ಭೂಮಿಯೊಂದಿಗೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಸ್ಲಮ್ ಅನ್ನು ಟೌನ್‌ಶಿಪ್ ಆಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅದಾನಿ, ಜಿಂದಾಲ್ ತಲಾ ಲಕ್ಷ ಕೋಟಿ, ಸ್ಟೈರ್ಲೈಟ್ ಪವರ್ ₹50 ಸಾವಿರ ಕೋಟಿ ಹೂಡಿಕೆಗೆ ಆಸಕ್ತಿ

ABOUT THE AUTHOR

...view details