ಕರ್ನಾಟಕ

karnataka

ETV Bharat / bharat

ಏಷ್ಯನ್​​ ಗೇಮ್ಸ್​ 2023: ಬಾಕ್ಸಿಂಗ್​ನಲ್ಲಿ ಬೆಳ್ಳಿ, ಆರ್ಚರಿಯಲ್ಲಿ ಚಿನ್ನ, ಸ್ಕ್ವಾಷ್​ನಲ್ಲಿ ಕಂಚು... 2018ರ ಏಷ್ಯಾಡ್ ದಾಖಲೆ ಮುರಿದ ಭಾರತ - ಪ್ರವೀಣ್ ಹೂಡಾ

ಏಷ್ಯನ್​ಗೇಮ್ಸ್​ನಲ್ಲಿ 75 ಕೆಜಿ ವಿಭಾಗದ ಮಹಿಳಾ ಬಾಕ್ಸಿಂಗ್ ಸ್ಫರ್ಧೆಯಲ್ಲಿ ಲೊವ್ಲಿನಾ ಬೆಳ್ಳಿಪದಕ ಗೆದ್ದಿದ್ದಾರೆ.

ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಬೆಳ್ಳಿ
ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಬೆಳ್ಳಿ

By ETV Bharat Karnataka Team

Published : Oct 4, 2023, 12:03 PM IST

Updated : Oct 4, 2023, 2:00 PM IST

ಹ್ಯಾಂಗ್​ಝೌ (ಚೀನಾ):ಏಷ್ಯನ್​​ಗೇಮ್ಸ್​ 11ನೇ ದಿನವೂ ಭಾರತದ ಪದಕಗಳ ಭೇಟಿ ಮುಂದುವರೆದಿದೆ. ಮಹಿಳೆಯರ 75 ಕೆಜಿ ವಿಭಾಗದ ಬಾಕ್ಸಿಂಗ್ ಸ್ಫರ್ಧೆಯಲ್ಲಿ ಲೊವ್ಲಿನಾ ಬೋರ್ಗೊಹೈನ್ ಬೆಳ್ಳಪದಕ ಗೆದ್ದಿದ್ದಾರೆ. ಫೈನಲ್​ ಪಂದ್ಯದದಲ್ಲಿ ಲೊವ್ಲಿನಾ ಬೊರ್ಗೊಹೈನ್ ಚೀನಾದ ಆಟಗಾರ್ತಿಯಿಂದ ಸೋಲನುಭವಿಸುವ ಮೂಲಕ ಚಿನ್ನದಿಂದ ವಂಚಿತರಾಗಿ ಬೆಳ್ಳಿಗೆ ತೃಪ್ತಿಪಟ್ಟರು.

ಇದಕ್ಕೂ ಮೊದಲು ಬಾಕ್ಸಿಂಗ್​ನಲ್ಲಿ ಪ್ರವೀಣ್ ಹೂಡಾ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆಯರ 57 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಅವರು ಚೀನಾದ ಲಿನ್ ವಿರುದ್ಧ 5-0 ಅಂತರದಿಂದ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ಪಿಪಟ್ಟರು.

ಮತ್ತೊಂದೆಡೆ ಸ್ಕ್ವಾಷ್ಯ್​​ ಡಬಲ್ಸ್​ನಲ್ಲಿ ಭಾರತ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಸ್ಕ್ವಾಷ್​​ ಮಿಶ್ರ ಡಬಲ್ಸ್​ ಪಂದ್ಯದಲ್ಲಿ ಅಭಯ್​ ಮತ್ತು ಅನಹತ್​ ಸಿಂಗ್​ ಜೋಡಿ ಕಂಚಿನ ಪದಕ್ಕೆ ತೃಪ್ತಿಪಡಬೇಕಾಯಿತು. ಮಿಶ್ರ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ಮಲೇಷ್ಯಾ ಜೋಡಿ 11-8, 2-11, 9-11 ಅಂತರದಿಂದ ಭಾರತದ ವಿರುದ್ಧ ಗೆಲುವು ದಾಖಲಿಸಿತು. ಇದರೊಂದಿಗೆ ಭಾರತ ಈವರೆಗೂ 73 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 16 ಚಿನ್ನ, 26 ಬೆಳ್ಳಿ, 31 ಕಂಚಿನ ಪದಕಗಳು ಸೇರಿವೆ.

ಇದಕ್ಕೂ ಮೊದಲು ಇಂದು ಅರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಲಭಿಸಿದೆ. ಜ್ಯೋತಿ ಸುರೇಖಾ ವೆನ್ನಂ ಮತ್ತು ಓಜಸ್ ಡಿಯೋಟಾಲೆ ಜೋಡಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿತು. ಫೈನಲ್‌ ಪಂದ್ಯದಲ್ಲಿ ಭಾರತದ ಜೋಡಿ ದಕ್ಷಿಣ ಕೊರಿಯಾವನ್ನು ಮಣಿಸಿತು. ಭಾರತ 159-158 ಅಂಕಗಳಿಂದ ಚಿನ್ನಕ್ಕೆ ಮುತ್ತಿಕ್ಕಿತು.

ಭಾರತ ಕಳೆದ ಏಷ್ಯನ್ ಗೇಮ್ಸ್‌ನಲ್ಲಿ 70 ಪದಕಗಳನ್ನು ಗೆದ್ದಿದ್ದ ಭಾರತ:2018ರಲ್ಲಿ ನಡೆದ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಭಾರತ 70 ಪದಕಗಳನ್ನು ಗೆದ್ದಿತ್ತು. ಇದರಲ್ಲಿ 16 ಚಿನ್ನ, 23 ಬೆಳ್ಳಿ ಮತ್ತು 31 ಕಂಚು ಸೇರಿದ್ದವು. ಪ್ರಸ್ತುತ ಭಾರತ 73 ಪದಕಗಳ ಗೆಲ್ಲುವ ಮೂಲಕ ಹಿಂದೆಂದೂ ಮಾಡಿರದ ಸಾಧನೆಯನ್ನು ಈ ಬಾರಿ ಮಾಡಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.

ಈ ಬಾರಿಯ ಏಷ್ಯನ್​ ಗೇಮ್ಸ್​ನಲ್ಲಿ ಭಾರತ 100 ಪದಕಗಳ ಗೆಲ್ಲುವ ನಿರೀಕ್ಷೆ ಇದೆ. ಜತೆಗೆ ಈ ಹಿಂದಿನ ದಾಖಲೆಯನ್ನು ಭಾರತ ಮುರಿಯುವ ಸಾಧ್ಯತೆಗಳಿವೆ. ಹಲವು ಪ್ರಮುಖ ಸ್ಪರ್ಧೆಗಳು ಇರುವ ಹಿನ್ನೆಲೆಯಲ್ಲಿ ಭಾರತಕ್ಕೆ ಮತ್ತಷ್ಟು ಪದಕಗಳು ಬರುವ ನಿರೀಕ್ಷೆ ಇದೆ. ಇದಕ್ಕಾಗಿ ಮುಂದಿನ ಎಲ್ಲ ಪಂದ್ಯಗಳಲ್ಲಿ ದೇಶದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿದ್ದೇ ಆದಲ್ಲಿ 100 ಪದಕಗಳ ಗುರಿಯನ್ನು ಭಾರತ ಸುಲಭವಾಗಿ ತಲುಪುವ ಸಾಧ್ಯತೆ ಇದೆ ಎಂಬ ಭರವಸೆ ವ್ಯಕ್ತವಾಗಿದೆ.

ಇದನ್ನೂ ಓದಿ:Asian Games 2023: ಆರ್ಚರಿಯಲ್ಲಿ ಜ್ಯೋತಿ ಓಜಸ್ ಅಚ್ಚರಿ ಪ್ರದರ್ಶನ .. ಭಾರತಕ್ಕೆ ಒಲಿದು ಬಂದ ಚಿನ್ನ..

Last Updated : Oct 4, 2023, 2:00 PM IST

ABOUT THE AUTHOR

...view details