ಕರ್ನಾಟಕ

karnataka

ETV Bharat / bharat

ನಗರಾಭಿವೃದ್ಧಿಗೆ ಏಷ್ಯಾ ಅಭಿವೃದ್ಧಿ ಬ್ಯಾಂಕ್​ನಿಂದ ಭಾರತಕ್ಕೆ 2,644 ಕೋಟಿ ಸಾಲ ಸೌಲಭ್ಯ ಘೋಷಣೆ - ಭಾರತಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕ್​ನಿಂದ ಸಾಲ

ಕೊಳವೆ ನೀರು ಸರಬರಾಜು ಮತ್ತು ನೈರ್ಮಲ್ಯ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ನೀತಿಗಳ ಸಾಕಾರಕ್ಕೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

India
ಸಾಲ ಸೌಲಭ್ಯ ಘೋಷಣೆ

By

Published : Dec 9, 2021, 11:22 PM IST

ನವದೆಹಲಿ:ನಗರ ಪ್ರದೇಶಗಳ ಅಭಿವೃದ್ಧಿಗೆ ನೆರವಾಗಲು ಭಾರತಕ್ಕೆ 2,644 ಕೋಟಿ (USD 350 ಮಿಲಿಯನ್) ಸಾಲವನ್ನು ನೀಡಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮುಂದಾಗಿದೆ.

ಕೊಳವೆ ನೀರು ಸರಬರಾಜು ಮತ್ತು ನೈರ್ಮಲ್ಯ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ನೀತಿಗಳ ಸಾಕಾರಕ್ಕೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿ ಮಾಡಿದ ಅಮೃತ್​ ಯೋಜನೆ ಮತ್ತು ಪ್ರಧಾನಮಂತ್ರಿ ಆವಾಸ್​ ಯೋಜನೆಯ ಅಡಿಯಲ್ಲಿ ಬಡವರು, ನಗರ ವಲಸೆಗಾರರು ಮತ್ತು ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ವಸತಿ ನಿರ್ಮಾಣಕ್ಕಾಗಿ ಈ ಸಾಲವನ್ನು ಬಳಕೆ ಮಾಡಿಕೊಳ್ಳಲು ಎಡಿಬಿ ಹೇಳಿದೆ.

ನಗರಗಳನ್ನು ಆರ್ಥಿಕವಾಗಿ ಸುಸ್ಥಿರ, ವಿವಿಧ ರಾಜ್ಯಗಳಲ್ಲಿ ನಗರ ಸೇವೆಗಳ ಮೂಲಭೂತ ಅಭಿವೃದ್ಧಿಗೆ ದೀರ್ಘಾವಧಿಯ ನಂಟು ಉಳಿಸಿಕೊಳ್ಳಲು ಈ ಸಾಲ ಸೌಲಭ್ಯವನ್ನು ಮುಂದುವರಿಸಲಾಗುತ್ತಿದೆ ಎಂದು ದಕ್ಷಿಣ ಏಷ್ಯಾದ ಎಡಿಬಿ ಪ್ರಧಾನ ನಗರಾಭಿವೃದ್ಧಿ ತಜ್ಞ ಸಂಜಯ್ ಜೋಶಿ ಹೇಳಿದ್ದಾರೆ.

ಭಾರತವು ಪ್ರಸ್ತುತ ಅಂದಾಜು 460 ಮಿಲಿಯನ್(46 ಕೋಟಿ) ನಗರ ಜನಸಂಖ್ಯೆಯನ್ನು ಹೊಂದಿದ್ದು, ವಿಶ್ವದಲ್ಲಿ ಎರಡನೇ ಅತಿ ದೊಡ್ಡ ನಗರ ಜನಸಂಖ್ಯೆಯಾಗಿದೆ. 2030ರ ವೇಳೆಗೆ ಇದು ಸುಮಾರು 600 ಮಿಲಿಯನ್(60 ಕೋಟಿ) ತಲುಪಲಿದೆ ಎಂದು ಅಂದಾಜಿಸಲಾಗಿದೆ. ವಾರ್ಷಿಕವಾಗಿ ಶೇ. 2ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.

For All Latest Updates

ABOUT THE AUTHOR

...view details