ಗುರುದಾಸ್‌ಪುರ (ಪಂಜಾಬ್) : ಎಎಸ್‌ಐ ಭೂಪಿಂದರ್ ಸಿಂಗ್ ಎಂಬವರು ಪತ್ನಿ ಬಲ್ಜಿತ್ ಕೌರ್ (40) ಮತ್ತು ಪುತ್ರ ಬಲ್‌ಪ್ರೀತ್ ಸಿಂಗ್ (19) ಎಂಬಿಬ್ಬರನ್ನು ಗುರುದಾಸ್‌ಪುರದ ಭುಂಬಲಿ ಗ್ರಾಮದಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ಇದಲ್ಲದೇ ಸಾಕು ನಾಯಿಗೂ ಗುಂಡು ಹಾರಿಸಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಎಸ್‌ಎಸ್‌ಪಿ ಗುರುದಾಸ್‌ಪುರ ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಗುರುದಾಸ್‌ಪುರ ಎಸ್‌ಎಸ್‌ಪಿ ಹರೀಶ್ ಕುಮಾರ್, ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಯನ್ನು ಬಂಧಿಸಲು ಪೊಲೀಸ್ ತಂಡ ಕಳುಹಿಸಲಾಗಿದೆ. ಆರೋಪಿ ತನ್ನ ಸರ್ವಿಸ್ ಗನ್‌ನಿಂದ ಪತ್ನಿ, ಮಗ ಹಾಗೂ ಸಾಕು ನಾಯಿಯನ್ನು ಕೊಂದಿದ್ದಾನೆ ಎಂದು ತಿಳಿಸಿದರು.
ಆರೋಪಿ ಭೂಪಿಂದರ್ ಸಿಂಗ್ ಪರಾರಿಯಾದ ಸುದ್ದಿ ಪಡೆದ ನಂತರ ಗುರುದಾಸ್‌ಪುರ ಎಸ್‌ಎಸ್‌ಪಿ ನಿರ್ದೇಶನದಂತೆ ಪೊಲೀಸರು ಎಎಸ್‌ಐ ಅವರ ಜಾಡು ಹಿಡಿದು ಪತ್ತೆ ಮಾಡಿ ಸುತ್ತುವರಿದು ಶರಣಾಗುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಎಎಸ್‌ಐ ಸ್ಥಳದಲ್ಲೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದರು ಎಂದು ತಿಳಿದುಬಂದಿದೆ.