ಹರಿದ್ವಾರ(ಉತ್ತರಾಖಂಡ):ಹರಿದ್ವಾರದ ವೈದ್ಯೆ ಡಾ.ಪ್ರಿಯಾ ಅಹುಜಾ, 3 ನಿಮಿಷ 29 ಸೆಕೆಂಡ್ಗಳ ಕಾಲ ಅಷ್ಟವಕ್ರಾಸನ(ಯೋಗದ ಎಂಟು ಕೋನದ ಭಂಗಿ) ಮಾಡಿ ವಿಶ್ವ ದಾಖಲೆ ಪಟ್ಟಿಗೆ ಸೇರಲು ಸಜ್ಜಾಗಿದ್ದಾರೆ. ಪ್ರಿಯಾ ಅಹುಜಾ ಅವರು ಈ ಹಿಂದೆ ಯೋಗಾಸನ ಗಿನ್ನಿಸ್ ವಿಶ್ವ ದಾಖಲೆಯಲ್ಲಿ 2 ನಿಮಿಷ 6 ಸೆಕೆಂಡುಗಳ ದಾಖಲೆ ಮುರಿದಿದ್ದಾರೆ. 3 ನಿಮಿಷ 29 ಸೆಕೆಂಡುಗಳ ಕಾಲ ಅಷ್ಟಾವಕ್ರಾಸನ ಯೋಗಾಸನ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
'ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್'ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂಬುದು ನನ್ನ ಕನಸಾಗಿತ್ತು. ಈಗ ಅದು ಈಡೇರುತ್ತಿದೆ. ಮಹಿಳೆಯರು ಏನು ಬೇಕಾದರೂ ಮಾಡಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲು ನಾನು ಬಯಸುತ್ತೇನೆ. ಎರಡು ಮಕ್ಕಳ ತಾಯಿಯಾದ ನಾನು ಈ ಕಠಿಣ ದಾಖಲೆ ಮುರಿಯಲು ಏಳು ವರ್ಷಗಳಿಂದ ತಯಾರಿ ನಡೆಸುತ್ತಿದ್ದೆ. ಇದಕ್ಕೆ ಇಡೀ ಕುಟುಂಬದ ಬೆಂಬಲವಿದೆ ಎನ್ನುತ್ತಾರೆ ಪ್ರಿಯಾ ಅಹುಜಾ.
ಹರಿದ್ವಾರದ ಗುರುಕುಲ ಕಾಂಗ್ರಿಯ ಪ್ರಸಿದ್ಧ ಯೋಗಾಚಾರ್ಯ ಬಲ್ಯಾನ್ ಮಾತನಾಡಿ, ಈ ಹಿಂದೆ ಈ ದಾಖಲೆಯನ್ನು ಭಾಗ್ಯಶ್ರೀ ಎಂಬುವವರು ಮಾಡಿದ್ದರು. ಇದು 2 ನಿಮಿಷ 6 ಸೆಕೆಂಡುಗಳವರೆಗೆ ಈ ದಾಖಲೆ ಇತ್ತು. ಇಂದು ಅದನ್ನು ಪ್ರಿಯಾ ಅಹುಜಾ ಮುರಿದಿದ್ದಾರೆ ಎಂದರು.
ಅಷ್ಟವಕ್ರಾಸನ:ಅಷ್ಟವಕ್ರಾಸನವು ಒಂದು ಸಂಕೀರ್ಣವಾದ ಯೋಗಾಸನ. ಇದನ್ನು ಸಾಮಾನ್ಯವಾಗಿ ಯೋಗ ಬೋಧಕರ ಸಹಾಯದಿಂದ ಅಭ್ಯಾಸ ಮಾಡಲಾಗುತ್ತದೆ. ಈ ಯೋಗಾಸನದಲ್ಲಿ, ದೇಹದ ಸ್ನಾಯುಗಳ ಶಕ್ತಿ ಮತ್ತು ದೈಹಿಕ ಸಮತೋಲನದ ಅಗತ್ಯವಿದೆ. ಇಂಗ್ಲಿಷಿನಲ್ಲಿ ಇದನ್ನು'Eight Angle Pose' ಎನ್ನುತ್ತಾರೆ.
ಅಷ್ಟವಕ್ರಾಸನ ಭಂಗಿ ಕುಳಿತುಕೊಳ್ಳುವ ಭಂಗಿಯಿಂದ ಆರಂಭವಾಗುತ್ತದೆ. ಒಂದು ಕೈ ಪಾದಗಳ ನಡುವೆ ನಿಂತಿದೆ. ಇನ್ನೊಂದು ಪಾದದ ಹೊರಭಾಗದಲ್ಲಿ ಮತ್ತು ಅಂಗೈಗಳು ನೆಲದ ಮೇಲೆ ಇರುತ್ತವೆ. ನೆಲದಿಂದ ಎರಡೂ ಪಾದಗಳನ್ನು ಎತ್ತುವ ಮೂಲಕ ವಿಭಿನ್ನ ಅಥವಾ ಆರಂಭಿಕ ಸ್ಥಾನವನ್ನು ನೀಡಲಾಗುತ್ತದೆ. ಎರಡೂ ಕಾಲುಗಳು ಬಾಗುತ್ತದೆ, ಒಂದು ಕಾಲು ಒಂದು ಮುಂದೋಳಿನ ಮೇಲೆ ಇದೆ. ಕಾಲುಗಳನ್ನು ನೇರಗೊಳಿಸಿದಾಗ ಪೂರ್ಣ ಭಂಗಿಯನ್ನು ನೀಡುತ್ತದೆ.
ದಂತಕಥೆ ಏನು ಹೇಳುತ್ತದೆ: ಯೋಗದಲ್ಲಿ ವಿವರಿಸಲಾದ 'ಅಷ್ಟವಕ್ರಾಸನ' ಅಭ್ಯಾಸವು ದೇಹದ ಎಂಟು ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಅಷ್ಟವಕ್ರಾಸನ ಎಂಬ ಸಂಸ್ಕೃತ ಪದದ ಅರ್ಥ ಎಂಟು + ವಕ್ರ + ಭಂಗಿ. ಅಂದರೆ ಎಂಟು ಸ್ಥಳಗಳಿಂದ ವಕ್ರವಾದ ದೇಹ ರಚನೆ. ಅಷ್ಟವಕ್ರಸನವನ್ನು ಮಹಾನ್ ಋಷಿ 'ಅಷ್ಟವಕ್ರ' ರಚಿಸಿದ. ವಾಸ್ತವವಾಗಿ, ಅಷ್ಟವಕ್ರ ಎಂಟು ದೈಹಿಕ ದೌರ್ಬಲ್ಯಗಳೊಂದಿಗೆ ಜನಿಸಿದನು. ಈತ ಸೀತೆಯ ತಂದೆ ಜನಕನ ಆಧ್ಯಾತ್ಮಿಕ ಗುರು.