ಗುವಾಹಟಿ (ಅಸ್ಸೋಂ): ಭಾರತದ ಮಾಜಿ ಕ್ರಿಕೆಟಿಗ ಅಶೋಕ್ ಮಲ್ಹೋತ್ರಾ ಅವರು ಅಸ್ಸೋಂ ಜನರ ಕುರಿತಾಗಿ ಕ್ರಿಕೆಟ್ ಕಮೆಂಟರಿ ವೇಳೆ ಅವಮಾನಕರ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅಸ್ಸೋಂ ಮತ್ತು ಬಂಗಾಳದ ನಡುವೆ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ಅಶೋಕ್ ಮಲ್ಹೋತ್ರಾ ತಮ್ಮ ಕಾಲದ ಅಸ್ಸೋಂ ಆಟಗಾರರನ್ನು 'ಎರಡನೇ ದರ್ಜೆಯ ನಾಗರಿಕರು' ಎಂದು ಉಲ್ಲೇಖಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ ತಂಡಕ್ಕಾಗಿ ಆಡಿದ ಅಶೋಕ್ ಮಲ್ಹೋತ್ರಾ ನಿವೃತ್ತಿಯ ನಂತರ ಅದೇ ತಂಡದ ಕೋಚ್ ಆಗಿ ಉಳಿದರು. ನಿನ್ನೆ ಅಸ್ಸೋಂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಂಗಾಳವನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿತ್ತು. ಈ ಗೆಲುವಿನಲ್ಲಿ ಅಶೋಕ್ ವಿವಾದಾತ್ಮಕ ಕಾಮೆಂಟ್ ಮಾಡಿದ್ದಾರೆ. "ನಮ್ಮ ಕಾಲದಲ್ಲಿ ಅಸ್ಸೋಂ ತಂಡವನ್ನು 'ಎರಡನೇ ದರ್ಜೆಯ ನಾಗರಿಕ' ಎಂದು ಪರಿಗಣಿಸಲಾಗಿತ್ತು" ಎಂದು ಅವರು ಹೇಳಿದರು, ಅವರ ಕಾಮೆಂಟ್ ನಂತರ ಟೀಕೆಗಳು ಪ್ರಾರಂಭವಾದವು.
ಅಸ್ಸೋಂನಲ್ಲಿ ಹಲವಾರು ಕ್ರಿಕೆಟ್ ಅಭಿಮಾನಿಗಳು ಮತ್ತು ಪ್ರಜ್ಞಾವಂತರು ಕಾಮೆಂಟೇಟರ್ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಟೀಕಾಕಾರರು ಅಸ್ಸೋಂನ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು. ಕಾಮೆಂಟೇಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಪತ್ರ ಕಳುಹಿಸಿದೆ.