ಕರ್ನಾಟಕ

karnataka

ETV Bharat / bharat

ಸೆಂಟ್ರಲ್ ಜೈಲಿನಲ್ಲಿ ಭಜನೆ, ಡಾನ್ಸ್​: ಅಸಾರಾಮ ನೃತ್ಯದ ವಿಡಿಯೋ ವೈರಲ್ - ಅಸರಾಮ ಬಾಪು ನೃತ್ಯ

ರಾಜಸ್ಥಾನದ ಜೋಧಪುರ ಸೆಂಟ್ರಲ್ ಜೈಲಿನಲ್ಲಿ ಬುಧವಾರ ಮಹಾಶಿವರಾತ್ರಿ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಸಾರಾಮ ಬಾಪು ಉತ್ಸಾಹದಿಂದಲೇ ಭಾಗವಹಿಸಿದ್ದಾರೆ.

asharam_jail
asharam_jail

By

Published : Mar 2, 2022, 5:27 PM IST

Updated : Mar 2, 2022, 5:45 PM IST

ಜೋಧಪುರ(ರಾಜಸ್ಥಾನ): ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಸ್ವಯಂ ಘೋಷಿತ ದೇವ ಮಾನವ ಅಸಾರಾಮ ಬಾಪು ಜೈಲಿನಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ರಾಜಸ್ಥಾನದ ಜೋಧಪುರ ಸೆಂಟ್ರಲ್ ಜೈಲಿನಲ್ಲಿ ಬುಧವಾರ ಮಹಾಶಿವರಾತ್ರಿ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಸಾರಾಮ ಬಾಪು ಉತ್ಸಾಹದಿಂದಲೇ ಭಾಗವಹಿಸಿದ್ದಾರೆ. ಅಲ್ಲದೇ, ಸತ್ಸಂಗದ ಸಮಯದಲ್ಲಿ ಧರಿಸುತ್ತಿದ್ದ ವೇಷಭೂಷಣದಲ್ಲಿ ತುಂಬಾ ಉತ್ಸಾಹ ಭರಿತರಾಗಿಯೇ ಭಜನಾ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಜತೆಗೆ ಇತರ ಕೈದಿಗಳು ಸಹ ಶಿವನ ಆರಾಧನೆಯಲ್ಲಿ ತೊಡಗಿರುವುದು ಸಹ ವಿಡಿಯೋದಲ್ಲಿ ಸೆರೆಯಾಗಿದೆ.

ಸೆಂಟ್ರಲ್ ಜೈಲಿನಲ್ಲಿ ಭಜನೆ, ಡಾನ್ಸ್​: ಅಸಾರಾಮ ನೃತ್ಯದ ವಿಡಿಯೋ ವೈರಲ್

ಈ ಬಗ್ಗೆ ಮಾತನಾಡಿರುವ ಜೈಲಿನ ಅಧೀಕ್ಷಕ ರಾಜಪಾಲ್ ಸಿಂಗ್, ಕೈದಿಗಳಿಗೆ ಮುಂದೆ ಉತ್ತಮ ಮತ್ತು ಮಾದರಿಯ ಜೀವನ ಸಾಗಿಸಲು ಇಂತಹ ಕಾರ್ಯಕ್ರಮ ಅನುಕೂಲವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ:ತಾಜ್‌​ಮಹಲ್‌ಗೆ​ ಬಂದು ಪಾಕ್‌ ಪರ​ ಘೋಷಣೆ; ಯುವಕನಿಗೆ ಥಳಿಸಿ ಪೊಲೀಸರಿಗೊಪ್ಪಿಸಿದ ಜನರು

ಕಳೆದ 8 ವರ್ಷಗಳಿಂದ ಜೇಲಿನಲ್ಲೇ ಇರುವ ಅಸಾರಾಮ ಬಾಪು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕಳೆದ ವರ್ಷ ಕೊರೊನಾ ಸೋಂಕಿಗೂ ಒಳಗಾಗಿದ್ದರು. ಆಗ ಅಸಾರಾಮ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿತ್ತು. ಅಲ್ಲದೇ, ಮೂತ್ರನಾಳದ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಆಗ ಏಮ್ಸ್​​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

Last Updated : Mar 2, 2022, 5:45 PM IST

ABOUT THE AUTHOR

...view details