ಕರ್ನಾಟಕ

karnataka

ETV Bharat / bharat

ಯುಪಿ ಅಖಾಡ : ಚುನಾವಣೆಗೆ 9 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಓವೈಸಿ - ಉತ್ತರ ಪ್ರದೇಶದಲ್ಲಿ ರಂಗೇರಿದ ಚುನಾವಣೆ

ಓವೈಸಿ ಅವರ ಪಕ್ಷವು ಉತ್ತರಪ್ರದೇಶದಲ್ಲಿ 100 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಜಿಸುತ್ತಿದೆ ಮತ್ತು ಒಂಬತ್ತು ಅಭ್ಯರ್ಥಿಗಳ ಘೋಷಣೆಯೊಂದಿಗೆ, ಪಕ್ಷವು ಯಾವುದೇ ರಾಜಕೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಊಹಾಪೋಹಗಳಿಗೆ ಕೊನೆ ಹಾಡಿದೆ..

Battle for UP: Owaisi's AIMIM announces nine candidates
Battle for UP: Owaisi's AIMIM announces nine candidates

By

Published : Jan 16, 2022, 5:21 PM IST

ಲಖನೌ: ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಉತ್ತರಪ್ರದೇಶದ ಒಂಬತ್ತು ವಿಧಾನಸಭಾ ಸ್ಥಾನಗಳಿಗೆ ತಮ್ಮ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯಾಧ್ಯಕ್ಷ ಶೌಕತ್ ಅಲಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಲೋನಿ (ಗಾಜಿಯಾಬಾದ್), ಗರ್ ಮುಕ್ತೇಶ್ವರ್ ಮತ್ತು ಧೌಲಾನಾ (ಹಾಪುರ್), ಸಿವಾಲ್ ಖಾನ್, ಸರ್ಧಾನ ಮತ್ತು ಕಿಥೋರ್, ಸಹರಾನ್‌ಪುರದ ಬೆಹತ್, ಬರೇಲಿ ಮತ್ತು ಸಹರಾನ್‌ಪುರ ಗ್ರಾಮಾಂತರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

ಓವೈಸಿ ಅವರ ಪಕ್ಷವು ಉತ್ತರಪ್ರದೇಶದಲ್ಲಿ 100 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಜಿಸುತ್ತಿದೆ ಮತ್ತು ಒಂಬತ್ತು ಅಭ್ಯರ್ಥಿಗಳ ಘೋಷಣೆಯೊಂದಿಗೆ, ಪಕ್ಷವು ಯಾವುದೇ ರಾಜಕೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಊಹಾಪೋಹಗಳಿಗೆ ಕೊನೆ ಹಾಡಿದೆ.

ಇದನ್ನೂ ಓದಿ: ಲಂಚ ಪ್ರಕರಣ: ಭಾರತೀಯ ಅನಿಲ ಪ್ರಾಧಿಕಾರದ ನಿರ್ದೇಶಕರನ್ನು ಬಂಧಿಸಿದ ಸಿಬಿಐ

ವರದಿಗಳ ಪ್ರಕಾರ ಅಸಾದುದ್ದೀನ್ ಓವೈಸಿ ಸಮಾಜವಾದಿ ಪಕ್ಷದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಮತ್ತು ಮೈತ್ರಿ ಬಯಸಿದ್ದರು ಎನ್ನಲಾಗಿದೆ. ಆದರೆ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಓವೈಸಿಯ ಪಕ್ಷವನ್ನು ನಂಬಲಿಲ್ಲ ಎಂದು ತಿಳಿದು ಬಂದಿದೆ. ಹೈದರಾಬಾದ್ ಮೂಲದ ಪಕ್ಷವು ಈ ಮೂಲಕ ಉತ್ತರಪ್ರದೇಶ ಚುನಾವಣೆಯಲ್ಲಿ ಏಕಾಂಗಿ ಹೋರಾಟ ನಡೆಸುತ್ತಿದೆ.

ABOUT THE AUTHOR

...view details