ಕರ್ನಾಟಕ

karnataka

ಓರ್ವ ಹುಡುಗಿ 18ನೇ ವಯಸ್ಸಿನಲ್ಲಿ ಪಿಎಂ ಆಯ್ಕೆ ಮಾಡಬಹುದಾದ್ರೆ, ಸಂಗಾತಿಯನ್ನ ಏಕೆ ಆಯ್ಕೆ ಮಾಡಬಾರ್ದು:ಓವೈಸಿ

By

Published : Dec 18, 2021, 4:06 AM IST

ಹುಡುಗಿಯರ ಕನಿಷ್ಠ ವಿವಾಹದ ವಯಸ್ಸುನ್ನು ಇದೀಗ 18ರಿಂದ 21ಕ್ಕೆ ಏರಿಕೆ ಮಾಡಲಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಸಂಸದ ಅಸಾದುದ್ದೀನ್​ ಓವೈಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

AIMIM President Asaduddin Owaisi tweet
AIMIM President Asaduddin Owaisi tweet

ನವದೆಹಲಿ: ಭಾರತೀಯ ಹೆಣ್ಣು ಮಕ್ಕಳ ವಿವಾಹದ ವಯಸ್ಸು ಇದೀಗ 18ರಿಂದ 21ಕ್ಕೆ ಏರಿಕೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಇದಕ್ಕೆ ಅಸ್ತು ಅಂದಿದೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಹೈದರಾಬಾದ್​ ಸಂಸದ ಅಸಾದುದ್ದೀನ್​ ಓವೈಸಿ, ಮೋದಿ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

18ನೇ ವಯಸ್ಸಿನಲ್ಲಿ ಓರ್ವ ಹುಡುಗಿ ಪ್ರಧಾನಿ ಆಯ್ಕೆ ಮಾಡಬಹುದಾದ್ರೆ, ಸಂಗಾತಿಯನ್ನ ಏಕೆ ಆಯ್ಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಂಸದ ಓವೈಸಿ, ಕೇಂದ್ರ ಸರ್ಕಾರದಿಂದ ನಾವು ನಿರೀಕ್ಷೆ ಮಾಡುತ್ತಿರುವ ವಿಶಿಷ್ಟವಾದ ಪಿತೃತ್ವ ಇದಾಗಿದೆ. 18ನೇ ವಯಸ್ಸಿನಲ್ಲಿ ಹುಡುಗ-ಹುಡುಗಿಯರು ವಿವಿಧ ಒಪ್ಪಂದಗಳಿಗೆ ಸಹಿ ಹಾಕಬಹುದು. ಉದ್ಯಮ ಪ್ರಾರಂಭ ಮಾಡಬಹುದು. ಜೊತೆಗೆ ಪ್ರಧಾನ ಮಂತ್ರಿಗಳನ್ನ ಸಹ ಆಯ್ಕೆ ಮಾಡಬಹುದಾಗಿದೆ. ಆದರೆ, ಮದುವೆ ಮಾತ್ರ ಮಾಡಿಕೊಳ್ಳಬಾರದು ಎಂದಿದ್ದಾರೆ.

ಇದನ್ನೂ ಓದಿರಿ:ಕೆಲಸ ಮಾಡ್ತಿದ್ದ ಕಂಪನಿಯಲ್ಲೇ ಕಳ್ಳತನ,ನೌಕರನ ಬಂಧನ: 25 ಲ್ಯಾಪ್​ಟಾಪ್​ ಪೊಲೀಸರ ವಶ

18ನೇ ವಯಸ್ಸಿನಲ್ಲಿ ಸಂಸದರು, ಶಾಸಕರನ್ನ ಆಯ್ಕೆ ಮಾಡುವ ಹುಡುಗಿಯರು ಈ ವಯಸ್ಸಿನಲ್ಲಿ ಮದುವೆ ಮಾಡಿಕೊಳ್ಳುವ ಹಾಗೂ ತಮ್ಮ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲವೇ? ಎಂದು ಪ್ರಶ್ನೆ ಮಾಡಿರುವ ಓವೈಸಿ, ಅವರು ಲೈಂಗಿಕವಾಗಿ ಸಂಬಂಧ ಹೊಂದಬಹುದು ಅಥವಾ ಲಿವ್​-ಇನ್​​ ರಿಲೇಶನ್​ಶಿಪ್​ನಲ್ಲಿ ಇರಬಹುದು. ಆದರೆ, ಜೀವನ ಸಂಗಾತಿ ಆಯ್ಕೆ ಮಾಡಲು ಸಾಧ್ಯವಿಲ್ಲ. ಇದು ಕೇಂದ್ರ ಸರ್ಕಾರದ ಹಾಸ್ಯಾಸ್ಪದ ನಿರ್ಧಾರವಾಗಿದೆ ಎಂದಿದ್ದಾರೆ.

ABOUT THE AUTHOR

...view details