ಕರ್ನಾಟಕ

karnataka

ETV Bharat / bharat

ರಾಹುಲ್ ಗಾಂಧಿಯ 'ಹಿಂದುಗಳ ಸರ್ಕಾರ' ಹೇಳಿಕೆಗೆ ಸಂಸದ ಅಸಾದುದ್ದೀನ್​ ಓವೈಸಿ ಕಿಡಿ - ರಾಹುಲ್​ ಗಾಂಧಿಗೆ ಓವೈಸಿ ಟಾಂಗ್​

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯ 'ಹಿಂದುಗಳ ಸರ್ಕಾರ'ದ ಹೇಳಿಕೆಗೆ ಕಿಡಿಕಾರಿರುವ ಹೈದರಾಬಾದ್​ ಸಂಸದ ಅಸಾದುದ್ದೀನ್​ ಓವೈಸಿ, 'ಕಾಂಗ್ರೆಸ್​ ಚುನಾವಣೆಗಾಗಿ ಹಿಂದುಗಳನ್ನು ಓಲೈಸುತ್ತಿದೆ' ಎಂದು ಟೀಕಿಸಿದ್ದಾರೆ..

asaduddin
ಅಸಾದುದ್ದೀನ್​ ಓವೈಸಿ ಕಿಡಿ

By

Published : Dec 12, 2021, 9:47 PM IST

ನವದೆಹಲಿ :ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯ 'ಹಿಂದುಗಳ ಸರ್ಕಾರ'ದ ಹೇಳಿಕೆಗೆ ಕಿಡಿಕಾರಿರುವ ಹೈದರಾಬಾದ್​ ಸಂಸದ ಅಸಾದುದ್ದೀನ್​ ಓವೈಸಿ 'ಕಾಂಗ್ರೆಸ್​ ಚುನಾವಣೆಗಾಗಿ ಹಿಂದುಗಳನ್ನು ಓಲೈಸುತ್ತಿದೆ' ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸಂಸದ ಓವೈಸಿ, ಭಾರತ ಹಿಂದುಗಳಿಗೆ ಮಾತ್ರ ಸೇರಿದ್ದಲ್ಲ, ಎಲ್ಲಾ ಭಾರತೀಯರಿಗೆ ಸೇರಿದ್ದಾಗಿದೆ. ದೇಶದಲ್ಲಿ ಎಲ್ಲಾ ಧರ್ಮದ ಜನರು ನೆಲೆಸಿದ್ದಾರೆ. ಕೇಂದ್ರದಲ್ಲಿ ಮುಂದೆ ಹಿಂದು ಸರ್ಕಾರವನ್ನು ತರಬೇಕು ಎಂಬ ರಾಹುಲ್​ ಗಾಂಧಿ ಹೇಳಿಕೆ ಕೇವಲ ಚುನಾವಣಾ ತಂತ್ರವಾಗಿದೆ ಎಂದು ಕಟಕಿಯಾಡಿದ್ದಾರೆ.

ಇದನ್ನೂ ಓದಿ: ಅವರದು 'ಸತ್ತಾ(ಅಧಿಕಾರ)ಗ್ರಹ'ವೇ ಹೊರತು 'ಸತ್ಯಾಗ್ರಹ'ವಲ್ಲ.. ಈ ದೇಶ 'ಹಿಂದೂ'ಗಳದ್ದು, 'ಹಿಂದುತ್ವವಾದಿ'ಗಳದ್ದಲ್ಲ.. ರಾಹುಲ್ ಗಾಂಧಿ

ಮುಂದುವರಿದು, ಕೇಂದ್ರದಲ್ಲಿ ಈಗಿರುವುದು ಹಿಂದುತ್ವವಾದಿಗಳ ಸರ್ಕಾರ. ಮುಂದೆ ಹಿಂದುಗಳ ಸರ್ಕಾರವನ್ನು ತರಬೇಕು ಎಂಬುದು 'ಜಾತ್ಯಾತೀತ' ಅಜೆಂಡಾವೇ ಎಂದು ಪ್ರಶ್ನಿಸಿರುವ ಅಸಾದುದ್ದೀನ್​ ಓವೈಸಿ, ರಾಹುಲ್​ ಹೇಳಿಕೆ ಕೇವಲ ಚುನಾವಣೆಯಲ್ಲಿ ಮತಗಳಿಕೆಗಾಗಿ ಹಿಂದುಗಳನ್ನು ಓಲೈಸುವುದಾಗಿದೆ ಎಂದು ಟೀಕಿಸಿದ್ದಾರೆ.

ರಾಜಸ್ತಾನದ ಜೈಪುರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ರಾಹುಲ್​ ಗಾಂಧಿ, ದೇಶದಲ್ಲಿ ಹಿಂದುತ್ವವಾದಿಗಳ ಸರ್ಕಾರವಿದೆ ಹೊರತು ಹಿಂದುಗಳ ಸರ್ಕಾರವಲ್ಲ. ಮುಂದಿನ ಚುನಾವಣೆಯಲ್ಲಿ ಹಿಂದುತ್ವವಾದಿಗಳ ಕಿತ್ತೊಗೆದು ಹಿಂದುಗಳ ಸರ್ಕಾರ ತರಬೇಕು ಎಂದು ಕರೆ ನೀಡಿದ್ದರು. ಇದೀಗ ಚರ್ಚೆಗೆ ಗ್ರಾಸವಾಗಿದೆ.

ABOUT THE AUTHOR

...view details