ನ್ಯೂಯಾರ್ಕ್:ವಿಶ್ವದ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್ ಅವರೊಂದಿಗೆ ಟ್ವಿಟರ್ ಕಂಪನಿಯು ಒಪ್ಪಂದ ಮಾಡಿಕೊಳ್ಳುತ್ತಿರುವ ಸುದ್ದಿ ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ ವರದಿಯಾಗುತ್ತಿದ್ದಂತೆ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ಟ್ವಿಟರ್‌ನ ಷೇರು ಮೌಲ್ಯ ಜಿಗಿಯಲು ಪ್ರಾರಂಭಿಸಿದ್ದು, ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ.
ಟ್ವಿಟರ್ ಕಂಪನಿಯ ಆಡಳಿತ ಮಂಡಳಿಯು ಟೆಸ್ಲಾ ಸಿಇಓ ಮಸ್ಕ್ ಅವರ ಅತ್ಯುತ್ತಮ ಆಫರ್ಗೆ ಒಪ್ಪಿಕೊಂಡಿದ್ದು, ಅಂತಿಮವಾಗಿ $44 ಬಿಲಿಯನ್‌ಗೆ ಟ್ವಿಟರ್ ಹಕ್ಕಿಯನ್ನು ಮಾರಾಟ ಮಾಡಲು ನಿರ್ಧರಿಸಿರುವ ಕುರಿತು ವರದಿಯಾಗಿದೆ. ಸುಮಾರು $44 ಬಿಲಿಯನ್ ಮೌಲ್ಯದ ಕಂಪನಿ ಸ್ವಾದೀನಕ್ಕೆ ನಿರ್ಣಾಯಕ ಒಪ್ಪಂದವನ್ನು ಒಪ್ಪಿಕೊಂಡಿದೆ ಎಂದು ಟ್ವಿಟರ್ ಪ್ರಕಟಿಸಿದೆ.
ನನ್ನ ಕೆಟ್ಟ ವಿಮರ್ಶಕರು ಕೂಡ ಟ್ವಿಟರ್ನಲ್ಲಿ ಉಳಿಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ಅದೇ ಅಲ್ವಾ ವಾಕ್ ಸ್ವಾತಂತ್ರ್ಯಕ್ಕಿರುವ ಅರ್ಥ' ಎಂದು ತನ್ನ ನೆಟ್ಟಿಗರನ್ನು ಉದ್ದೇಶಿಸಿ ಮಸ್ಕ್ ಟ್ವೀಟ್ ಮಾಡಿದ್ದಾರೆ. ಅದಕ್ಕೂ ಕೆಲವು ನಿಮಿಷಗಳ ಮೊದಲು, ಈ ಬಿಲಿಯನೇರ್, ಅಮೆರಿಕನ್ ಕವಿ ರಾಬರ್ಟ್ ಫ್ರಾಸ್ಟ್ ಅವರ ಪ್ರಣಯ ಕವಿತೆ 'ಎ ಲೈನ್ ಸ್ಟಾರ್ಮ್ ಸಾಂಗ್: ಮತ್ತು ಬಿ ಮೈ ಲವ್ ಇನ್ ದಿ ರೈನ್' ಅನ್ನು ಟ್ವಿಟರ್ನಲ್ಲಿ ಉಲ್ಲೇಖಿಸಿದ್ದಾರೆ.
ಫೋರ್ಬ್ಸ್ ನೈಜ - ಸಮಯದ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ಮಸ್ಕ್ $269.7 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇದು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದ ಅಮೆಜಾನ್‌ನ ಜೆಫ್ ಬೆಜೋಸ್‌ಗಿಂತ $99 ಬಿಲಿಯನ್ಗಿಂತಲೂ ಹೆಚ್ಚಾಗಿದೆ.