ನವದೆಹಲಿ: ಹೊಸ ಸಂಶೋಧನೆಯ ಪ್ರಕಾರ ರೆಡ್ ವೈನ್ ಕೋವಿಡ್-19 ವೈರಸ್ ತಡೆಯಲು ಸಹಾಯ ಮಾಡುತ್ತದೆ. ವಾರಕ್ಕೆ ಐದು ಗ್ಲಾಸ್‌ಗಿಂತ ಹೆಚ್ಚು ಕುಡಿಯುವ ಜನರು ವೈರಸ್‌ಗೆ ತುತ್ತಾಗುವ ಅಪಾಯವು ಶೇ.17ರಷ್ಟು ಕಡಿಮೆ ಎಂದು ಅಧ್ಯಯನವನ್ನು ಉಲ್ಲೇಖಿಸಿ ಡೈಲಿ ಮೇಲ್ ವರದಿ ಮಾಡಿದೆ.
ಇದು ಪಾಲಿಫಿನಾಲ್ ಅಂಶದಿಂದಾಗಿದೆ ಎಂದು ತಜ್ಞರು ನಂಬುತ್ತಾರೆ. ಜ್ವರ ಮತ್ತು ಉಸಿರಾಟದ ಪ್ರದೇಶಕ್ಕೆ ಸಂಬಂಧಿಸಿದ ವೈರಸ್‌ಗಳ ಪರಿಣಾಮಗಳನ್ನು ತಡೆಯುತ್ತದೆ.
ವಾರಕ್ಕೆ ಒಂದರಿಂದ ನಾಲ್ಕು ಗ್ಲಾಸ್‌ಗಳನ್ನ ಕುಡಿಯುವವರು, ವೈನ್ ಕುಡಿಯದವರಿಗಿಂತ ವೈರಸ್‌ಗೆ ತುತ್ತಾಗುವ ಅಪಾಯ 8% ಕಡಿಮೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಬಿಯರ್ ಮತ್ತು ಸೈಡರ್ ಕುಡಿಯುವವರು ಕೋವಿಡ್ ಅನ್ನು ಹೊಂದುವ ಸಾಧ್ಯತೆ 28 ಪ್ರತಿಶತ ಹೆಚ್ಚು. ಬ್ರಿಟಿಷ್ ಡೇಟಾಬೇಸ್ ಯುಕೆ ಬಯೋಬ್ಯಾಂಕ್‌ನ ಡೇಟಾವನ್ನು ಚೀನಾದ ಶೆನ್‌ಜೆನ್ ಕಾಂಗ್ನಿಂಗ್ ಆಸ್ಪತ್ರೆಯಲ್ಲಿ ವಿಶ್ಲೇಷಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ