ಕರ್ನಾಟಕ

karnataka

ETV Bharat / bharat

24ನೇ ವಸಂತಕ್ಕೆ ಕಾಲಿಟ್ಟ ಶಾರೂಖ್ ಪುತ್ರ.. ಹುಟ್ಟುಹಬ್ಬದ ಮುನ್ನಾದಿನ ವಿಚಾರಣೆ ಎದುರಿಸಿ ಬಂದ ಆರ್ಯನ್​

ಆರ್ಯನ್ ಖಾನ್(Aryan Khan) ಇಂದು 24ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಸುಮಾರು 7 ಗಂಟೆಗಳ ಕಾಲ ಎನ್​​ಸಿಬಿ(ncb) ವಿಚಾರಣೆ ನಡೆಸಿ ಬಳಿಕ ರಾತ್ರಿ 1 ಗಂಟೆಗೆ ಬಿಡುಗಡೆ ಮಾಡಲಾಗಿದೆ.

Aryan Khan investigation
ಆರ್ಯನ್ ಖಾನ್ ವಿಚಾರಣೆ

By

Published : Nov 13, 2021, 9:37 AM IST

Updated : Nov 13, 2021, 9:50 AM IST

ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ (Bollywood actor Shah Rukh Khan) ಪುತ್ರ ಆರ್ಯನ್ ಖಾನ್(Aryan Khan)ಇಂದು 24ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ(drugs case) ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದಿರುವ ಆರ್ಯನ್ ಖಾನ್ ನಿನ್ನೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (Narcotics Control Bureau) ಮುಂದೆ ವಿಚಾರಣೆಗೆ ಹಾಜರಾಗಿದ್ದರು.

ನವದೆಹಲಿಯ ಎನ್‌ಸಿಬಿ(NCB) ವಿಶೇಷ ತಂಡವು ಮುಂಬೈನ ಎನ್​ಸಿಬಿ ಕಚೇರಿಯಲ್ಲಿ ವಿಚಾರಣೆ(Aryan Khan investigation) ನಡೆಸಿತು. ಆರ್ಯನ್ ಖಾನ್​​ ಜನ್ಮದಿನದ((Aryan Khan birthday) ಮುನ್ನಾದಿನದಂದು ಅಂದರೆ ಶುಕ್ರವಾರ ಸಂಜೆ 5 ಗಂಟೆಗೆ ವಿಚಾರಣೆ ಪ್ರಾರಂಭಗೊಂಡು, ಸುಮಾರು 7 ಗಂಟೆಗಳ ಕಾಲ ವಿಚಾರಣೆ ನಡೆಸಿ ಬಳಿಕ ರಾತ್ರಿ 1 ಗಂಟೆಗೆ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ:NCB ಮುಂದೆ ಹಾಜರಾದ ಆರ್ಯನ್ ಖಾನ್

ಅಕ್ಟೋಬರ್ 3ರಂದು ಡ್ರಗ್ಸ್​ ಪ್ರಕರಣದಲ್ಲಿ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 20 ಜನರು ಬಂಧನಕ್ಕೆ ಒಳಗಾಗಿದ್ದರು. ಈ ಸಂಬಂಧ ಆರ್ಯನ್ ಖಾನ್ ವಿಚಾರಣೆ ಎದುರಿಸುತ್ತಿದ್ದಾರೆ.

ಬಾಂಬೆ ಹೈಕೋರ್ಟ್ (Bombay High Court ) ಅಕ್ಟೋಬರ್ 29ರಂದು ಆರ್ಯನ್ ಖಾನ್‌ಗೆ ಜಾಮೀನು ನೀಡಿತ್ತು. ಅದರಲ್ಲಿ ಅವರು ಪ್ರತಿ ಶುಕ್ರವಾರ ಎನ್‌ಸಿಬಿ ಮುಂದೆ ಹಾಜರಾಗಬೇಕು ಮತ್ತು ಅವರ ಪಾಸ್‌ಪೋರ್ಟ್ (Passport) ಅನ್ನು ಒಪ್ಪಿಸುವಂತೆ ಹೇಳಿತ್ತು. ಅದರಂತೆ ನಿನ್ನೆ ವಿಚಾರಣೆ ನಡೆದಿದೆ. ಇಂದು ಆರ್ಯನ್ ಹುಟ್ಟುಹಬ್ಬವಾಗಿದ್ದು, ಶುಭಾಶಯಗಳ ಸಂದೇಶ ಹರಿದು ಬರುತ್ತಿವೆ.

Last Updated : Nov 13, 2021, 9:50 AM IST

ABOUT THE AUTHOR

...view details