ಮುಂಬೈ:ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನವಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್‌ರನ್ನು ಅಕ್ಟೋಬರ್ 7 ರವರೆಗೆ ಎನ್‌ಸಿಬಿ ವಶಕ್ಕೆ ನೀಡಿ ಮುಂಬೈನ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿದೆ.
23 ವರ್ಷದ ಆರ್ಯನ್ ಖಾನ್ ಬಳಿ ಡ್ರಗ್ಸ್ ಪತ್ತೆಯಾಗಿರಲಿಲ್ಲ. ಆದರೆ, ಅವರ ಫೋನ್ ಚಾಟ್‌ಗಳನ್ನು ಆಧರಿಸಿ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆಯ ಬಗ್ಗೆ ತನಿಖೆ ಮಾಡಬೇಕು. ಹೀಗಾಗಿ ಇನ್ನೂ 1 ವಾರ ಕಾಲ ತಮ್ಮ ವಶಕ್ಕೆ ನೀಡುವಂತೆ ಮಾದಕ ವಸ್ತು ನಿಯಂತ್ರಣ ದಳ - ಎನ್‌ಸಿಬಿ ಕೋರ್ಟ್‌ಗೆ ಮನವಿ ಮಾಡಿತು.
ಆದರೆ, ನ್ಯಾಯಾಲಯದ ಇನ್ನೂ ಎರಡು ದಿನ ವಶಕ್ಕೆ ನೀಡಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಇತರ 7 ಮಂದಿಯನ್ನೂ ಎನ್‌ಸಿಬಿ ಅವಶಕ್ಕೆ ನೀಡಿರುವ ಅವಧಿಯನ್ನು ಕೋರ್ಟ್ ವಿಸ್ತರಿಸಿದೆ. ಹಡಗು ಮುಂಬೈಗೆ ವಾಪಸ್ ಆದ ಬಳಿಕ ಓರ್ವ ಪ್ರಯಾಣಿಕ ಸೇರಿ ಮೂವರನ್ನ ಬಂಧಿಸಲಾಗಿದೆ.
ಕವಿ-ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ಕೇಸ್ ದಾಖಲು
ಇದೇ ಪ್ರಕರಣ ಸಂಬಂಧ ರಾಷ್ಟ್ರೀಯ ಸ್ವಯಂ ಸೇವಕ ಸಂಘ-ಆರ್‌ಎಸ್‌ಎಸ್‌ಅನ್ನು ಟೀಕಿಸಿದ ಆರೋಪದಲ್ಲಿ ಕವಿ - ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ಮುಂಬೈ ಪೊಲೀಸರು ದೂರು ದಾಖಲಿಸಿದ್ದಾರೆ. ಮುಲುಂದ್ ಪೊಲೀಸ್ ಠಾಣೆಯಲ್ಲಿ ವಕೀಲ ಸಂತೋಷ್ ದುಬೆ ಅವರು ಭಾನುವಾರ ದೂರು ನೀಡಿದ ಆಧಾರದಲ್ಲಿ ಅಖ್ತರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 500 (ಮಾನನಷ್ಟ) ಅಡಿ ದೂರು ದಾಖಲಿಸಲಾಗಿದೆ ಎಂದು ಮುಲುಂಡ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.