ಮುಂಬೈ(ಮಹಾರಾಷ್ಟ್ರ): ಡ್ರಗ್ಸ್ ಕೇಸ್ನಲ್ಲಿ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಬಂಧನವಾಗಿದ್ದು, ಇದರ ಪರಿಣಾಮ ಇದೀಗ ತಂದೆಯ ಮೇಲೂ ಬೀರಲು ಶುರುವಾಗಿದೆ.
ನಟ ಶಾರುಖ್ ಖಾನ್ ನಟನೆ ಮಾಡಿದ್ದ ಜಾಹೀರಾತುವೊಂದನ್ನ ಇದೀಗ ತಡೆಹಿಡಿಯಲಾಗಿದೆ. ಪ್ರತಿಷ್ಠಿತ ಎಜ್ಯುಕೇಷನಲ್ ಕಂಪನಿವೊಂದರಲ್ಲಿ ಶಾರುಖ್ ಖಾನ್ ನಟನೆ ಮಾಡಿದ್ದರು. ಆದರೆ, ಅವರ ಮಗ ಡ್ರಗ್ಸ್ ಕೇಸ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಕಂಪನಿ ಈ ನಿರ್ಧಾರ ಕೈಗೊಂಡಿದೆ. 2017ರಿಂದಲೂ ಶಾರುಖ್ ಖಾನ್ ಎಜ್ಯುಕೇಷನಲ್ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಇದಕ್ಕಾಗಿ ಪ್ರತಿ ವರ್ಷ ಶಾರುಖ್ ಖಾನ್ 3-4 ಕೋಟಿ ರೂ. ವಾರ್ಷಿಕ ಆದಾಯ ಪಡೆದುಕೊಳ್ಳುತ್ತಿದ್ದರು.
ಇದನ್ನೂ ಓದಿರಿ:Rave party ದಾಳಿ 'ಪೂರ್ವ ಯೋಜಿತ ಸಂಚು'.. ಮೂವರು ಬಂಧಿತರನ್ನ NCB ಬಿಡುಗಡೆ ಮಾಡಿದೆ.. NCP ಆರೋಪ
ಯಾವ ಕಾರಣಕ್ಕಾಗಿ ಈ ನಿರ್ಧಾರ?
ಶಾರುಖ್ ಖಾನ್ ಎಜ್ಯುಕೇಷನಲ್ ಆ್ಯಪ್ವೊಂದರ ಮುಖಾಂತರ ಮಕ್ಕಳಿಗೆ ಶಿಕ್ಷಣ ಹೇಳುವ ಜಾಹೀರಾತು ಇದಾಗಿದ್ದು, ಸದ್ಯ ಅವರ ಮಗನಿಗೆ ಸರಿಯಾಗಿ ಪಾಠ ಹೇಳದ ನಟ ಬೇರೆ ಮಕ್ಕಳಿಗೆ ಹೇಗೆ ಪಾಠ ಮಾಡಲು ಸಾಧ್ಯ ಎಂಬ ಮಾತು ಕೇಳಿ ಬರಲು ಶುರುವಾಗಿದ್ದವು. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಕಂಪನಿ ಈ ನಿರ್ಧಾರ ಕೈಗೊಂಡಿದೆ.
ಶಾರೂಖ್ ಖಾನ್ ಕಾರ್ ಡ್ರೈವರ್ಗೂ ಸಮನ್ಸ್.. ವಿಚಾರಣೆಗೆ ಹಾಜರು
ಡ್ರಗ್ ಪಾರ್ಟಿಯಲ್ಲಿ ಭಾಗಿಯಾದ ಆರೋಪ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ಈಗಾಗಲೇ ವಜಾಗೊಂಡಿದ್ದು, ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಡ್ರಗ್ಸ್ ವಿಚಾರಣೆಗೆ ಸಂಬಂಧಿಸಿದಂತೆ ಈಗಾಗಲೇ ಶಾರುಖ್ ಖಾನ್ ಅವರ ಡ್ರೈವರ್ಗೆ ಎನ್ಸಿಬಿ ನೋಟಿಸ್ ಜಾರಿ ಮಾಡಿದ್ದು, ಇಂದು ಕಚೇರಿಯಲ್ಲಿ ಅಧಿಕಾರಿಗಳ ಎದುರು ಹಾಜರಾದರು.