ಮುಂಬೈ: ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದಿರುವಆರ್ಯನ್ ಖಾನ್ಅವರು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) (Narcotics Control Bureau )ಮುಂದೆ ಹಾಜರಾಗಿದ್ದಾರೆ.
ನವೆಂಬರ್ 7ರಂದು ಎನ್‌ಸಿಬಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರ್ಯನ್ ಖಾನ್ (Aryan Khan) ಅವರನ್ನು ವಿಚಾರಣೆಗೆ ಕರೆಸಿತ್ತು. ಆದರೆ, ಜ್ವರ ಇದೆ ಎಂದು ಅವರು ಹಾಜರಾಗಿರಲಿಲ್ಲ.
ಬಾಂಬೆ ಹೈಕೋರ್ಟ್ (Bombay High Court ) ಅಕ್ಟೋಬರ್ 29ರಂದು ಆರ್ಯನ್ ಖಾನ್‌ಗೆ ಜಾಮೀನು ನೀಡಿತ್ತು. ಅದರಲ್ಲಿ ಅವರು ಪ್ರತಿ ಶುಕ್ರವಾರ ಎನ್‌ಸಿಬಿ ಮುಂದೆ ಹಾಜರಾಗಬೇಕು ಮತ್ತು ಅವರ ಪಾಸ್‌ಪೋರ್ಟ್ (Passport) ಅನ್ನು ಒಪ್ಪಿಸುವಂತೆ ಹೇಳಿತ್ತು.
ಹಾಗೆ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುಮ್ ಧಮೇಚಾ (Aryan Khan, Arbaaz Merchant, Munmum Dhamecha ) ತಮ್ಮ ಉಪಸ್ಥಿತಿಯನ್ನು ಗುರುತಿಸಲು ಪ್ರತಿ ಶುಕ್ರವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಎನ್‌ಸಿಬಿ ಮುಂಬೈ ಕಚೇರಿಗೆ ಹಾಜರಾಗುವಂತೆ ಆ ವೇಳೆ ನ್ಯಾಯಾಲಯ ಸೂಚಿಸಿತ್ತು.
ಆರ್ಯನ್ ಖಾನ್ಅವರನ್ನು ಅಕ್ಟೋಬರ್ 3ರಂದು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 20 ಜನರು ಬಂಧನಕ್ಕೆ ಒಳಗಾಗಿದ್ದರು.