ಕರ್ನಾಟಕ

karnataka

ETV Bharat / bharat

ಗುಜರಾತ್​​ನಲ್ಲಿ AAP ಕಾರ್ಯಕರ್ತರ ಮೇಲೆ ಬಿಜೆಪಿ ಹಲ್ಲೆ..ವಿಡಿಯೋ ಸಮೇತ ಟ್ವೀಟ್ ಮಾಡಿದ ಕೇಜ್ರಿವಾಲ್! - AAP ಕಾರ್ಯಕರ್ತರ ಮೇಲೆ ಬಿಜೆಪಿ ಹಲ್ಲೆ

ಗುಜರಾತ್​​ನಲ್ಲಿ ಇದೇ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ಆಮ್​ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಅಲ್ಲಿನ ಬಿಜೆಪಿ ಹಲ್ಲೆ ಮಾಡಿದೆ ಎಂದು ಕೇಜ್ರಿವಾಲ್​ ಗಂಭೀರ ಆರೋಪ ಮಾಡಿದ್ದಾರೆ.

kejriwal tweeted video of beating aap workers
kejriwal tweeted video of beating aap workers

By

Published : May 2, 2022, 8:57 PM IST

ನವದೆಹಲಿ:ದೆಹಲಿ ಮುಖ್ಯಮಂತ್ರಿ, ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​ ವಿಡಿಯೋ ತುಣುಕೊಂದನ್ನ ಟ್ವೀಟ್ ಮಾಡಿದ್ದು, ಇದರಲ್ಲಿ ಆಡಳಿತ ಪಕ್ಷ ಬಿಜೆಪಿ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ. ಗುಜರಾತ್​​ನಲ್ಲಿ ಆಮ್​ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ ಹಲ್ಲೆ ನಡೆಸಿದೆ ಎಂದು ದೂರಿದ್ದಾರೆ.

ಇಂತಹ ಗೂಂಡಾಗಳನ್ನ ನೋಡಿ. ಬಹಿರಂಗವಾಗಿ ಹಲ್ಲೆ ನಡೆಸುತ್ತಿದ್ದಾರೆ. ದೇಶಾದ್ಯಂತ ಇವರ ಗೂಂಡಾಗಿರಿ ನಡೆಯುತ್ತಿದ್ದು, ಈ ಘಟನೆಗಳಿಂದ ದೇಶ ಪ್ರಗತಿಯಾಗಲು ಸಾಧ್ಯವೆ? ಇಂಥ ಜನರಿಂದ ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉದ್ಯೋಗ ಸಿಗಲು ಸಾಧ್ಯವಿಲ್ಲ. ಇಂತಹ ಗೂಂಡಾಗಳ ವಿರುದ್ಧ ದೇಶದ ಯುವಕರು ಒಂದಾಗಬೇಕು ಎಂದಿದ್ದಾರೆ.

ಇದನ್ನೂ ಓದಿ:TO-LET ಬೋರ್ಡ್​​ ನೋಡಿ ಬಾಡಿಗೆ ಕೇಳಲು ಬಂದ ಜೋಡಿ.. ಒಳಹೋಗಿ ಮಾಡಿದ್ದೇನು ಗೊತ್ತಾ!?

ಗುಜರಾತ್​​ನಲ್ಲಿ ಮುಂದಿನ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಲ್ಲಿನ ಬರೂಚ್​​ನಲ್ಲಿ ಕೇಜ್ರಿವಾಲ್ ಭಾಷಣ ಮಾಡಿದರು. ಈ ವೇಳೆ ಅಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಅವರು ಮಾತನಾಡಿದರು. ನಮಗೆ ಒಂದೇ ಒಂದು ಅವಕಾಶ ನೀಡಿ, ಇಲ್ಲಿನ ವ್ಯವಸ್ಥೆಯನ್ನ ಸರಿದಾರಿಗೆ ತರುತ್ತೇವೆ ಎಂದರು.

ABOUT THE AUTHOR

...view details