ನವದೆಹಲಿ: ನಗರದ ಎಲ್ಎನ್ಜೆಪಿ ಆಸ್ಪತ್ರೆಗೆ ಇಂದು ಭೇಟಿ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಂಪುಟದ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರನ್ನು ಭೇಟಿಯಾಗಿ, ಆರೋಗ್ಯ ಕ್ಷೇಮ ವಿಚಾರಿಸಿದರು. ಜೈನ್ ಅವರನ್ನು ಧೈರ್ಯಶಾಲಿ ಮತ್ತು ಹೀರೋ ಎಂದು ಬಣ್ಣಿಸಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ವರ್ಷದ ನಂತರ ಭೇಟಿ: ಇಂದು ನಾನು ಒಬ್ಬ ಧೈರ್ಯಶಾಲಿ ಮತ್ತು ವೀರನನ್ನು ಭೇಟಿಯಾದೆ. ಒಂದು ವರ್ಷದ ನಂತರ ಈ ಭೇಟಿ ಸಾಧ್ಯವಾಗಿದೆ. ತಿಹಾರ್ ಜೈಲಿನಲ್ಲಿರುವ ಜೈನ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಸುಪ್ರೀಂ ಕೋರ್ಟ್ 6 ವಾರಗಳ ಕಾಲ ಜಾಮೀನು ನೀಡಿದೆ. ಈ ಕಾಲವಧಿಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಭೇಟಿಯ ಫೋಟೋವನ್ನು ಆಮ್ ಆದ್ಮಿ ಪಕ್ಷದ ಅಧಿಕೃತ ಟ್ವಿಟರ್ದಲ್ಲಿ ಪೋಸ್ಟ್ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಸತ್ಯೇಂದ್ರ ಜೈನ್ ಅವರನ್ನು ಕೇಜ್ರಿವಾಲ್ ಅಪ್ಪಿಕೊಂಡಿರುವುದನ್ನು ಚಿತ್ರದಲ್ಲಿ ನೋಡಬಹುದು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಮೇ ತಿಂಗಳಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ಜೈನ್ ಅವರಿಗೆ ವೈದ್ಯಕೀಯ ಕಾರಣಗಳಿಂದಾಗಿ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಈ ಅವಧಿಯಲ್ಲಿ ಸತ್ಯೇಂದ್ರ ಮಾಧ್ಯಮಗಳೊಂದಿಗೆ ಮಾತನಾಡುವುದನ್ನು ಕೋರ್ಟ್ ನಿಷೇಧಿಸಿದೆ.
ಈ ಮೊದಲು ಮಾಜಿ ಸಚಿವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಉಸಿರಾಟದ ತೊಂದರೆ ಉಂಟಾಗಿ ಲೋಕನಾಯಕ ಜಯಪ್ರಕಾಶ್ (ಎಲ್ಎನ್ಜೆಪಿ) ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಶುಕ್ರವಾರ, ಮೇ 26 ರಂದು ಸುಪ್ರೀಂ ಕೋರ್ಟ್ ಜೈನ್ ಅವರ ಆಯ್ಕೆಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲು ಅನುಮತಿಸಿದೆ. ಈ ಅವಧಿಯಲ್ಲಿ ಸಾಕ್ಷಿಗಳನ್ನು ಪ್ರಭಾವ ಬೀರಿ ನಾಶಪಡಿಸಿದಂತೆ ಹಾಗೂ ದೆಹಲಿ ಬಿಟ್ಟುಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಜುಲೈ 11 ರವರೆಗೆ ಜಾಮೀನು ಮೇಲೆ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಜುಲೈ 10 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ. ನ್ಯಾಯಾಲಯವು ಆಮ್ ಆದ್ಮಿ ಪಕ್ಷದ ನಾಯಕನ ವೈದ್ಯಕೀಯ ವರದಿಗಳನ್ನು ಮಂಡಿಸಲು ಕೇಳಲಿದೆ.
ಸತ್ತೇಂದ್ರ ಜೈನ್ ಪ್ರತಿನಿಧಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ದೆಹಲಿಯ ಎಲ್ಎನ್ಜೆಪಿ ಪಂತ್ ಆಸ್ಪತ್ರೆಯ ವರದಿಗಳನ್ನು ಉಲ್ಲೇಖಿಸಿದ್ದರು. ವೈದ್ಯಕೀಯ ಆರೈಕೆಯ ತುರ್ತು ಅಗತ್ಯತೆ ಇದೆ ಎಂದು ದೃಢಪಡಿಸಿ, ಮಾನವೀಯ ಆಧಾರದ ಮೇಲೆ ಜಾಮೀನಿಗೆ ವಾದಿಸಿದ್ದರು. ಜೈನ್ ಅವರ 33 ಕೆಜಿ ತೂಕ ಇಳಿಕೆ ಮತ್ತು ಬಿದ್ದು ಗಾಯಗೊಂಡು ಕೆಲವು ಭಾಗದಲ್ಲಿ ಪೆಟ್ಟಾಗಿರುವ ಶಸ್ತ್ರಚಿಕಿತ್ಸೆಯ ಅಗತ್ಯತೆಯನ್ನು ವಿವರಿಸಿದ್ದರು. ಮಾಜಿ ಸಚಿವರ ತೂಕ ಇಳಿಕೆಗೆ ಅವರ ನಂಬಿಕೆ, ಸಂಬಂಧಿಸಿದ ಉಪವಾಸದ ಕಾರಣವನ್ನು ಉಲ್ಲೇಖಿಸಿದ್ದಾರೆ. ಎಎಪಿಯ ಊಹೆಗೂ ನಿಲುಕದ ತೂಕ ನಷ್ಟದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಜಾರಿ ನಿರ್ದೇಶನಾಲಯ (ಇಡಿ) ಈ ಅಂಶವನ್ನು ಎತ್ತಿದ್ದು, ಇದು ಆತ ಜೈಲಿನಲ್ಲಿ ಇರುವುದಕ್ಕೆ ಕಾರಣವಾಗಿರಬಾರದು ಎಂದು ಹೇಳಿದೆ.
ಇದನ್ನೂಓದಿ:'ಸಂಸತ್ ಉದ್ಘಾಟನೆ ರಾಜ್ಯಾಭಿಷೇಕವಲ್ಲ': ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ