ಚಂಡೀಗಢ(ಪಂಜಾಬ್): ಪಂಜಾಬ್ನ ವಿದ್ಯುತ್ ಇಲಾಖೆ ಅಧಿಕಾರಿಗಳೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಭೆ ನಡೆಸಿದ್ದು, ಇದಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗೈರು ಹಾಜರಾಗಿರುವುದು ಅನೇಕ ವಿವಾದಕ್ಕೆ ಕಾರಣವಾಗಿದೆ. ಎಎಪಿ ಮುಖ್ಯಸ್ಥರ ನಡೆ ವಿರುದ್ಧ ಪಂಜಾಬ್, ದೆಹಲಿ ಕಾಂಗ್ರೆಸ್ ಸೇರಿದಂತೆ ಅನೇಕ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಪಂಜಾಬ್ ಸರ್ಕಾರ ಎಎಪಿ ಪಕ್ಷದ ಮುಖ್ಯಸ್ಥರ ರಿಮೋಟ್ ಕಂಟ್ರೋಲ್ ಆಗಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಪಂಜಾಬ್ ವಿಧಾನಸಭೆ ಚುನಾವಣೆ ವೇಳೆ ಆಮ್ ಆದ್ಮಿ ಪಕ್ಷ ಅನೇಕ ರೀತಿಯ ಭರವಸೆ ನೀಡಿದ್ದು, ಅಲ್ಲಿನ ಜನರಿಗೆ ಉಚಿತವಾಗಿ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದ್ದರು. ಈ ವಿಚಾರವಾಗಿ ಪಂಜಾಬ್ ರಾಜ್ಯ ವಿದ್ಯುತ್ ನಿಗಮ ನಿಯಮಿತದ ಉನ್ನತ ಅಧಿಕಾರಿಗಳನ್ನ ಭೇಟಿ ಮಾಡಿದ ಕೇಜ್ರಿವಾಲ್ ಅವರೊಂದಿಗೆ ಸಭೆ ನಡೆಸಿದರು.
ಇದನ್ನೂ ಓದಿ:ಪಿಂಚಣಿಗಾಗಿ 56 ವರ್ಷ ಹೋರಾಡಿ ಕೊನೆಗೂ ಗೆದ್ದ ಹುತಾತ್ಮ ಯೋಧನ ಪತ್ನಿ!
ಪಂಜಾಬ್ನಲ್ಲಿ ಆಮ್ ಆದ್ಮಿ ಸರ್ಕಾರ ರಚನೆಯಾಗಿ ಕೆಲ ದಿನಗಳಲ್ಲಿ ಪಂಜಾಬ್ ಮೇಲೆ ಅರವಿಂದ್ ಕೇಜ್ರಿವಾಲ್ ಹಿಡಿತ ಸಾಧಿಸಿದ್ದು, ಇದರ ವಿರುದ್ಧ ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡ ವಾಗ್ದಾಳಿ ನಡೆಸಿದ್ದಾರೆ. ಭಗವಂತ್ ಮಾನ್ ಗೈರಿನಲ್ಲಿ ಅರವಿಂದ್ ಕೇಜ್ರಿವಾಲ್ ಸಭೆ ನಡೆಸಿದ್ದು, ಪಂಜಾಬ್ ರಿಮೋಟ್ ಕಂಟ್ರೋಲ್ ದೆಹಲಿಯಲ್ಲಿರುವುದನ್ನ ಬಹಿರಂಗಪಡಿಸಿದೆ.ಇದು ಪಂಜಾಬ್ಗೆ ಮಾಡಿರುವ ಅವಮಾನ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ತಕ್ಷಣವೇ ಸ್ಪಷ್ಟೀಕರಣ ನೀಡಬೇಕು ಎಂದಿದ್ದಾರೆ.
ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೂಡ ವಾಗ್ದಾಳಿ ನಡೆಸಿದ್ದು, ನಾವು ನಿರೀಕ್ಷೆ ಮಾಡಿರುವುದಕ್ಕಿಂತಲೂ ಮಿಂಚಿತವಾಗಿ ಪಂಜಾಬ್ ಮೇಲೆ ಅರವಿಂದ್ ಕೇಜ್ರಿವಾಲ್ ನಿಯಂತ್ರಣ ತೆಗೆದುಕೊಂಡಿದ್ದಾರೆ. ಭಗವಂತ್ ಮಾನ್ ಕೇವಲ ರಬ್ಬರ್ ಸ್ಟಾಂಪ್ ಎನ್ನುವುದು ಸಾಬೀತುಗೊಂಡಿದೆ ಎಂದಿದ್ದಾರೆ.