ಹಿಮ್ಮತ್ನಗರ(ಗುಜರಾತ್):ಕೇಂದ್ರ ತನಿಖಾ ದಳ(ಸಿಬಿಐ), ಜಾರಿ ನಿರ್ದೇಶನಾಲಯ(ಇಡಿ) ದುರ್ಬಳಿಕೆ ಮಾಡಿಕೊಂಡು ದೆಹಲಿ ಸರ್ಕಾರ ಹಾಗೂ ಆಮ್ ಆದ್ಮಿಪಕ್ಷ ಒಡೆಯಲು ಕೇಂದ್ರ ಯತ್ನಿಸುತ್ತಿದ್ದು, ಬಿಜೆಪಿಯ ಆಪರೇಷನ್ ಕಮಲ್ ವಿಫಲಗೊಂಡಿದೆ ಎಂದು ವಾಗ್ದಾಳಿ ನಡೆಸಿದ್ದ ಕೇಜ್ರಿವಾಲ್ ಇದೀಗ, ಗುಜರಾತ್ ವಿಧಾನಸಭೆ ಚುನಾವಣೆಯನ್ನ ಮಹಾಭಾರತದ ಧರ್ಮಯುದ್ಧಕ್ಕೆ ಹೋಲಿಕೆ ಮಾಡಿದ್ದಾರೆ.
ಮಹಾಭಾರತದ ಧರ್ಮಯುದ್ಧ: ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ನಡುವಿನ ಸ್ಪರ್ಧೆ ಧರ್ಮಯುದ್ಧಕ್ಕಾಗಿ ನಡೆಯಲಿದ್ದು, ಬಿಜೆಪಿಗೆ ತನಿಖಾ ಸಂಸ್ಥೆಗಳ ಬೆಂಬಲವಿದ್ದರೆ, ನಮಗೆ ಶ್ರೀಕೃಷ್ಣನ ಬೆಂಬಲವಿದೆ ಎಂದು ದೆಹಲಿ ಸಿಎಂ ಕೇಜ್ರಿವಾಲ್ ತಿಳಿಸಿದರು. ಗುಜರಾತ್ನ ಹಿಮ್ಮತ್ನಗರದಲ್ಲಿ ಮಾತನಾಡಿರುವ ಅವರು, ಬಿಜೆಪಿ ಆಡಳಿತವಿರುವ ಗುಜರಾತ್ ಇದೀಗ ಬದಲಾವಣೆಗೋಸ್ಕರ ಹಂಬಲಿಸುತ್ತಿದೆ. ಆಮ್ ಆದ್ಮಿ ಪಕ್ಷಕ್ಕೆ ಇಲ್ಲಿ ಅಪಾರ ಬೆಂಬಲ ಸಿಕ್ಕಿದೆ. ಡಿಸಿಎಂ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ತನಿಖೆ ನಡೆಸಲು ಇದೇ ಕಾರಣ ಎಂದು ಅವರು ತಿಳಿಸಿದರು.
ಮಹಾಭಾರತದ ಧರ್ಮಯುದ್ಧ ಆರಂಭಗೊಂಡಿದೆ. ಬಿಜೆಪಿ ಕೌರವರ ಪಾತ್ರ ನಿರ್ವಹಿಸುತ್ತಿದ್ದು, ನಮಗೆ ವಿಜಯಶಾಲಿ ಪಾಂಡವರ ರೀತಿಯಲ್ಲಿದ್ದೇವೆ. ನಮಗೆ ಭಗವಾನ್ ಶ್ರೀಕೃಷ್ಣನ ಬೆಂಬಲವಿದೆ. ಗೆಲುವಿಗೋಸ್ಕರ ಅರ್ಜುನ್ ತನ್ನೊಂದಿಗೆ ಶ್ರೀಕೃಷ್ಣನನ್ನು ಬಯಸಿದ್ದರೆ, ದುರ್ಯೋಧನ ತನ್ನ ಸೈನ್ಯಕ್ಕಾಗಿ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆ, ಪೊಲೀಸ್ರನ್ನ ಬಳಕೆ ಮಾಡಿಕೊಳ್ಳುತ್ತಿದೆ. ಅಂತಿಮವಾಗಿ ಸತ್ಯಕ್ಕೆ ಜಯವಾಗಲಿದೆ ಎಂದರು.