ಇಟಾನಗರ: ಅರುಣಾಚಲ ಪ್ರದೇಶ ಸರ್ಕಾರವು ರಾಜ್ಯದ 200 ಶಾಲೆಗಳಲ್ಲಿ ಫುಟ್‌ಬಾಲ್ ಕ್ರೀಡೆ ಉತ್ತೇಜಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಶಿಕ್ಷಣ ಸಚಿವ ತಬಾ ಟೆದಿರ್ ಹೇಳಿದರು. 'ಶಾಲೆಗಾಗಿ ಫುಟ್‌ಬಾಲ್' ಕಾರ್ಯಕ್ರಮವು 6 ರಿಂದ 13 ವರ್ಷದೊಳಗಿನ ಪ್ರತಿಭೆಗಳನ್ನು ರೂಪಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ಈ ವಿಷಯದ ಬಗ್ಗೆ ಸೋಮವಾರ ಸಭೆ ನಡೆಸಿದ್ದು, ಶಿಕ್ಷಣ ಮತ್ತು ಕ್ರೀಡಾ ಇಲಾಖೆಗಳ ಅಧಿಕಾರಿಗಳು ಮತ್ತು ಅರುಣಾಚಲ ಪ್ರದೇಶ ಫುಟ್ಬಾಲ್ ಅಸೋಸಿಯೇಷನ್ (ಎಪಿಎಫ್‌ಎ) ಸದಸ್ಯರು ಹಾಜರಿದ್ದರು.