ಗುವಾಹಟಿ (ಅಸ್ಸೋಂ): 20 ಕಿ.ಮೀ ಉದ್ದದ ಕಿಮಿನ್ - ಪೋಟಿನ್ ರಸ್ತೆ ಸೇರಿದಂತೆ 17 ರಸ್ತೆಗಳನ್ನು ಉದ್ಘಾಟಿಸಲು ಜೂನ್ 17 ರಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅರುಣಾಚಲ ಪ್ರದೇಶದ ಕಿಮಿನ್ಗೆ ಭೇಟಿ ನೀಡಿದ್ದರು. ರಕ್ಷಣಾ ಸಚಿವರೊಂದಿಗೆ ಕೇಂದ್ರ ಸಚಿವ ಕಿರಣ್ ರಿಜಿಜು, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಸಹ ಉಪಸ್ಥಿತರಿದ್ದರು.
ಇನ್ನು ಕಾರ್ಯಕ್ರಮವನ್ನು ಆಯೋಜಿಸಿದ ಬಾರ್ಡರ್ ರೋಡ್ಸ್ ಆರ್ಗನೈಸೇಶನ್, ಅರುಣಾಚಲ್ ಬದಲಿಗೆ ಕಿಮಿನ್ ರಸ್ತೆಯನ್ನು ಅಸ್ಸೋಂನ ಭಾಗವೆಂದು ಉಲ್ಲೇಖಿಸಿದೆ. ಅರುಣಾಚಲ ಪ್ರದೇಶವನ್ನು ಉಲ್ಲೇಖಿಸಿರುವ ಸೈನ್‌ಬೋರ್ಡ್‌ಗಳು ಮತ್ತು ಬ್ಯಾನರ್‌ಗಳನ್ನು ಬಿಳಿ ಬಣ್ಣ ಹಚ್ಚಿ ಮರೆಮಾಚಲಾಗಿದೆ.
ಆಯಕಟ್ಟಿನ ಗಡಿ ಯೋಜನೆಗಳಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸುವುದನ್ನು ತಪ್ಪಿಸಲು ಅವರು ಅರುಣಾಚಲ ಪ್ರದೇಶದ ಹೆಸರನ್ನು ಮರೆಮಾಚಿದ್ದಾರೆ ಎಂದು ಬಿಆರ್ಒ ಸಮರ್ಥನೆ ನೀಡಿದೆ. ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ಗೆ ರಾಜನಾಥ್ ಸಿಂಗ್ ಭೇಟಿ ನೀಡಿದ್ದನ್ನು ಕಳೆದ ವರ್ಷ ಚೀನಾ ತೀವ್ರವಾಗಿ ಆಕ್ಷೇಪಿಸಿತ್ತು. ಇನ್ನು ನೆರೆಯ ದೇಶವು ದಕ್ಷಿಣ ಟಿಬೆಟ್‌ನ ಒಂದು ಭಾಗವೆಂದು ಹೇಳಿಕೊಳ್ಳುತ್ತಿತ್ತು.