ಇಟಾನಗರ(ಅರುಣಾಚ ಪ್ರದೇಶ): ಹಿಮಾಚಲ ಪ್ರದೇಶದಲ್ಲಿನ 130 ಪಂಚಾಯ್ತಿ ಸ್ಥಾನಗಳ ಪೈಕಿ ಭಾರತೀಯ ಜನತಾ ಪಾರ್ಟಿ ಅವಿರೋಧವಾಗಿ 102 ಸ್ಥಾನಗಳಲ್ಲಿ ಆಯ್ಕೆಯಾಗಿದೆ ಎಂದು ಪಂಚಾಯತ್ ರಾಜ್ ಸಚಿವ ಬಮಾಂಗ್ ಫೆಲಿಕ್ಸ್ ತಿಳಿಸಿದ್ದಾರೆ.
ಈ ಎಲ್ಲ ಕ್ಷೇತ್ರಗಳಿಗೆ ಜುಲೈ 12ರಂದು ಚುನಾವಣೆ ನಡೆಯಬೇಕಿತ್ತು. ಆದರೆ, 102 ಸ್ಥಾನಗಳನ್ನ ಬಿಜೆಪಿ ಅವಿರೋಧವಾಗಿ ಗೆದ್ದುಕೊಂಡಿದೆ. ಇನ್ನೂ 14 ಸ್ಥಾನಗಳನ್ನ ಕಾಂಗ್ರೆಸ್ ಗೆದ್ದಿದ್ದು, ಉಳಿದ ಸ್ಥಾನಗಳಲ್ಲಿ ಎನ್ಪಿಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಫೆಲಿಕ್ಸ್ ಹೇಳಿದ್ದಾರೆ. ಕುರುಂಗ್ ಕುಮೆಯಲ್ಲಿ ಬಿಜೆಪಿ ಐದು ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅದರ ಮಿತ್ರಪಕ್ಷ ಎನ್ಪಿಪಿ 1 ಸ್ಥಾನ ಗೆದ್ದಿದೆ.ಕ್ರಾದಾಡಿ ಗ್ರಾಮ ಪಂಚಾಯ್ತಿಯಲ್ಲಿ ಕಾಂಗ್ರೆಸ್ 1 ಸ್ಥಾನದಲ್ಲಿ ಆಯ್ಕೆಯಾಗಿದ್ದು, ಉಳಿದ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಆಯ್ಕೆಯಾಗಿದೆ.