ಕರ್ನಾಟಕ

karnataka

ETV Bharat / bharat

ಕೇಂದ್ರ ಚು.ನಾವಣಾ ಆಯೋಗದ ನೂತನ ಆಯುಕ್ತರಾಗಿ ಅರುಣ್​ ಗೋಯೆಲ್​ ಅಧಿಕಾರ ಸ್ವೀಕಾರ - ಪಂಜಾಬ್​ ಕೇಡರ್​ ಐಎಎಸ್​ ಅಧಿಕಾರಿ

ಪಂಜಾಬ್​ ಕೇಡರ್​ ಐಎಎಸ್​ ಅಧಿಕಾರಿ ಆಗಿದ್ದ ಅರುಣ್​ ಗೋಯೆಲ್​ ಅವರನ್ನು ಚುನಾವಣಾ ಆಯೋಗದ ನೂತನ ಆಯುಕ್ತರನ್ನಾಗಿ ಶನಿವಾರ ನೇಮಕ ಮಾಡಲಾಗಿದೆ.

Arun Goel assumed office as the new Commissioner of Election Commission of India
ಭಾರತದ ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅರುಣ್​ ಗೋಯೆಲ್​ ಅಧಿಕಾರ ಸ್ವೀಕಾರ

By

Published : Nov 21, 2022, 12:04 PM IST

ನವದೆಹಲಿ: ಭಾರತ ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅರುಣ್​ ಗೋಯೆಲ್​ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ನಿವೃತ್ತ ಐಎಎಸ್​ ಅಧಿಕಾರಿಯಾಗಿದ್ದು (1985 ಪಂಜಾಬ್​ ಕೇಡರ್​) ರಾಷ್ಟ್ರಪತಿಗಳು ನೇಮಕ ಮಾಡಿ ಆದೇಶಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್​ ಕುಮಾರ್​ ಮತ್ತು ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಅವರೊಂದಿಗೆ ಇದೀಗ ಗೋಯೆಲ್‌ ಕಾರ್ಯನಿರ್ವಹಿಸಲಿದ್ದಾರೆ.

ಭಾರಿ ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಸ್ಥಾನದಿಂದ ಅರುಣ್​ ಗೋಯೆಲ್​ ಶುಕ್ರವಾರ ಸ್ವಯಂ ನಿವೃತ್ತಿ ಪಡೆದಿದ್ದರು.

ಇದನ್ನೂ ಓದಿ:1350 ನಾಣ್ಯ, 5 ಟನ್‌ ಮರಳು..: ಫಿಫಾ ಟೂರ್ನಿಗೆ ಸುದರ್ಶನ್‌ ಪಟ್ನಾಯಕ್‌ ಶುಭಾಶಯ

ABOUT THE AUTHOR

...view details