ಮುಂಬೈ, ಮಹಾರಾಷ್ಟ್ರ: ಭಾರತದ ಅತ್ಯಂತ ಮಾನ್ಯತೆ ಪಡೆದ ಜೈಲುಗಳಲ್ಲಿ ಒಂದಾದ ಮುಂಬೈನ ಆರ್ಥರ್ ರೋಡ್ ಜೈಲು 804 ಕೈದಿಗಳ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈಗ ಇಲ್ಲಿ 3 ಸಾವಿರಕ್ಕೂ ಹೆಚ್ಚು ಕೈದಿಗಳು ಇರುವುದು ತಿಳಿದು ಬಂದಿದೆ. 2018 ರಲ್ಲಿ ಸರ್ಕಾರವು ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತರಲು ಬಯಸಿದಾಗ ಅವರ ರಕ್ಷಣಾ ತಂಡವು ದೇಶದ ಜೈಲುಗಳ ಕಳಪೆ ಪರಿಸ್ಥಿತಿಗಳನ್ನು ಉಲ್ಲೇಖಿಸಿ ಅವರನ್ನು ಹಸ್ತಾಂತರಿಸಬಾರದು ಎಂದು ವಾದಿಸಿತು. ನಂತರ ಆ ಜೈಲನ್ನು ಬ್ಯಾರಕ್ ಸಂಖ್ಯೆ 12 ವಿಶೇಷ ಸೌಲಭ್ಯಗಳೊಂದಿಗೆ ಸಜ್ಜು ಪಡಿಸಲಾಯಿತು.
ಬ್ಯಾರಕ್ ಸಂಖ್ಯೆ 12ರಲ್ಲಿ ಐಷಾರಾಮಿ ಸೌಲಭ್ಯ:ಗಂಭೀರ ಆರೋಪ ಕೇಳಿ ಬಂದಾಗ ಸರ್ಕಾರವು ಮುಂಬೈ ಸೆಂಟ್ರಲ್ ಜೈಲ್ನ್ ಬ್ಯಾರಕ್ ಸಂಖ್ಯೆ 12ರ ನವೀಕರಣ ಕಾರ್ಯ ಕೈಗೊಂಡಿತು. ಬಳಿಕ ಭಾರತೀಯ ಜೈಲುಗಳು ನಿಜವಾಗಿಯೂ ಉತ್ತಮವಾಗಿವೆ ಎಂದು ಸಾಬೀತುಪಡಿಸಿತು.
1925 ರಲ್ಲಿ ಚಿಂಚಪೋಕ್ಲಿಯಲ್ಲಿ ಆರು ಎಕರೆ ಪ್ರದೇಶದಲ್ಲಿ ಅರ್ಥರ್ ರೋಡ್ ಜೈಲು (ಮುಂಬೈ ಸೆಂಟ್ರಲ್ ಜೈಲ್) ಅನ್ನು ನಿರ್ಮಿಸಲಾಯಿತು. ಈ ಜೈಲಿನ ಒಳಭಾಗದಲ್ಲಿರುವ ಬ್ಯಾರಕ್ ಸಂಖ್ಯೆ 12 ಅತ್ಯಂತ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.
ಬ್ಯಾರಕ್ ಸಂಖ್ಯೆ 12 ವಿಭಾಗವು ಗ್ರೌಂಡ್ ಪ್ಲಸ್ ಒನ್ ಹಳೆಯ ಕಟ್ಟಡದಲ್ಲಿದೆ. ಹಿಂದಿನ ಕೈದಿಗಳಲ್ಲಿ 26/11 ಅಪರಾಧಿ ಅಜ್ಮಲ್ ಕಸಬ್, ಬಾಲಿವುಡ್ ನಟ ಸಂಜಯ್ ದತ್, ಸ್ಟಾರ್ ಟಿವಿ ಸಿಇಒ ಪೀಟರ್ ಮುಖರ್ಜಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದ ಆರೋಪಿಗಳಾದ ವಿಪುಲ್ ಅಂಬಾನಿ ಮತ್ತು ವಾಧವಾನ್ ಸಹೋದರರಾದ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ಕಪಿಲ್ ಮತ್ತು ಧೀರಜ್ ಸಹ ಇಲ್ಲೇ ಶಿಕ್ಷೆ ಅನುಭವಿಸಿದರು.