ಕರ್ನಾಟಕ

karnataka

ETV Bharat / bharat

'ಬಂಗಾಳದಲ್ಲಿ ದುರಹಂಕಾರ, ಹಣಬಲ, ಜೈ ಶ್ರೀರಾಮ್ ಘೋಷಣೆ ದುರುಪಯೋಗ ಸೋತಿದೆ' - ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ ರಂತಹ ಘಟಾನುಘಟಿ ನಾಯಕರ ಅಬ್ಬರದ ಪ್ರಚಾರದ ನಡುವೆಯೂ ಬಂಗಾಳದಲ್ಲಿ ಬಿಜೆಪಿ ಸೋತಿದ್ದಕ್ಕೆ ಕಪಿಲ್ ಸಿಬಲ್ ವ್ಯಂಗ್ಯವಾಡಿದ್ದಾರೆ.

Kapil Sibal
ಕಪಿಲ್ ಸಿಬಲ್

By

Published : May 3, 2021, 10:28 AM IST

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜಯಗಳಿಸಿ ಬಿಜೆಪಿಗೆ ಪೆಟ್ಟು ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ದುರಹಂಕಾರ, ಹಣಬಲ, ಜೈ ಶ್ರೀರಾಮ್ ಘೋಷಣೆಯ ದುರುಪಯೋಗ ಸೋತಿದೆ ಎಂದು ಹೇಳಿದ್ದಾರೆ.

"ಪಶ್ಚಿಮ ಬಂಗಾಳದಲ್ಲಿ ದುರಹಂಕಾರ, ಹಣಬಲ, ಜೈ ಶ್ರೀರಾಮ್ ಘೋಷಣೆಯನ್ನು ರಾಜಕೀಯಕ್ಕಾಗಿ ಬಳಸಿರುವುದು, ಒಡೆದು ಆಳುವ ತಂತ್ರ, ಚುನಾವಣಾ ಆಯೋಗ ಸೋಲು ಕಂಡಿದೆ. ಇವೆಲ್ಲದರ ವಿರುದ್ಧ ನಿಂತು ಮಮತಾ ಬ್ಯಾನರ್ಜಿ ಗೆದ್ದರು" ಎಂದು ಕಪಿಲ್ ಸಿಬಲ್ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಚಾಂಪಿಯನ್‌ ದೀದಿ ಸೋತರೂ ಬಂಗಾಳದ ಮುಖ್ಯಮಂತ್ರಿ: ಹೇಗೆ ಗೊತ್ತೇ?

ವಿಧಾನ ಸಮರದಲ್ಲಿ 213 ಸ್ಥಾನಗಳನ್ನು ಟಿಎಂಸಿ ಪಡೆದು ಭರ್ಜರಿ ಜಯ ಗಳಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾರಂತಹ ಘಟಾನುಘಟಿ ನಾಯಕರ ಅಬ್ಬರದ ಪ್ರಚಾರದ ನಡುವೆಯೂ ಬಿಜೆಪಿ 75 ಸ್ಥಾನಗಳಿಗೆ ತೃಪ್ತಿ ಪಡೆದುಕೊಂಡಿದೆ.

ABOUT THE AUTHOR

...view details