ಲಖನೌ (ಉತ್ತರ ಪ್ರದೇಶ): ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತ್ತು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಇತರರಿಗೆ ಭಾರತದಲ್ಲಿ ನೆಲೆಸಲು ಸಹಾಯ ಮಾಡಿದ್ದಕ್ಕಾಗಿ ಯುಪಿ ಭಯೋತ್ಪಾದನಾ ನಿಗ್ರಹ ದಳ ನೂರ್ ಆಲಂ ಎಂಬ ರೋಹಿಂಗ್ಯಾ ಪ್ರಜೆಯನ್ನು ಬಂಧಿಸಿದೆ. ಐದು ದಿನಗಳ ಕಾಲ ಆರೋಪಿಯನ್ನು ರಿಮಾಂಡ್ ಹೋಂನಲ್ಟಿಟ್ಟು ಲಖನೌ ಕರೆತರಲಾಯಿತು. ಈ ವೇಳೆ ಆಲಂ, ನಕಲಿ ದಾಖಲೆಗಳನ್ನು ಪಡೆಯಲು ಯುಪಿ ಮತ್ತು ಎನ್ಸಿಆರ್ನ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡಿದ್ದೇನೆ ಎಂಬುದಾಗಿ ತಿಳಿಸಿದ್ದಾನೆ.
ರೋಹಿಂಗ್ಯಾಗಳ ಅಕ್ರಮ ವಾಸಕ್ಕೆ ಸಾಥ್ ನೀಡಿದ್ದಾರಂತೆ ಯುಪಿ ಆಫೀಸರ್ಸ್..!
ರೋಹಿಂಗ್ಯಾಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆ ತಂದ ನಂತರ ನಕಲಿ ದಾಖಲೆಗಳ ಸಹಾಯದಿಂದ ಉತ್ತರ ಪ್ರದೇಶಕ್ಕೆ ಕಳುಹಿಸುತ್ತೇನೆ. ಅದೇ ದಾಖಲೆಗಳ ಸಹಾಯದಿಂದ ಭಾರತೀಯ ಪಾಸ್‌ಪೋರ್ಟ್‌ಗಳನ್ನು ತಯಾರಿಸಿದ ನಂತರ ರೋಹಿಂಗ್ಯಾಗಳನ್ನು ಕೊಲ್ಲಿ ರಾಷ್ಟ್ರಗಳಿಗೆ ಕಳುಹಿಸಲಾಗುವುದು ಎಂದು ಆಲಂ ಬಾಯ್ಬಿಟ್ಟಿದ್ದಾನೆ.
ರೋಹಿಂಗ್ಯಾ
ಎಟಿಎಸ್ ಅಧಿಕಾರಿಗಳ ಪ್ರಕಾರ, ರೋಹಿಂಗ್ಯಾಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆ ತಂದ ನಂತರ ನಕಲಿ ದಾಖಲೆಗಳ ಸಹಾಯದಿಂದ ಉತ್ತರ ಪ್ರದೇಶಕ್ಕೆ ಕಳುಹಿಸುತ್ತೇನೆ. ಅದೇ ದಾಖಲೆಗಳ ಸಹಾಯದಿಂದ ಭಾರತೀಯ ಪಾಸ್‌ಪೋರ್ಟ್‌ಗಳನ್ನು ತಯಾರಿಸಿದ ನಂತರ ರೋಹಿಂಗ್ಯಾಗಳನ್ನು ಕೊಲ್ಲಿ ರಾಷ್ಟ್ರಗಳಿಗೆ ಕಳುಹಿಸಲಾಗುವುದು ಎಂದು ಆಲಂ ಬಾಯ್ಬಿಟ್ಟಿದ್ದಾನೆ.
ಜೂನ್ 7 ರಂದು ಎಟಿಎಸ್ ಗಾಜಿಯಾಬಾದ್ನ ನೂರ್ ಆಲಂ ಮತ್ತು ಆತನ ಸಹಚರ ಅಮೀರ್ನನ್ನು ಬಂಧಿಸಿತ್ತು. ಅಂದು ನಕಲಿ ದಾಖಲೆಗಳ ಜತೆ 10 ಲಕ್ಷ ರೂ. ವಶಪಡಿಸಿಕೊಳ್ಳಲಾಗಿತ್ತು.