ಕರ್ನಾಟಕ

karnataka

ETV Bharat / bharat

ಜಮ್ಮು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪಾಕ್​ ನುಸುಳುಕೋರ ಸಾವು - ಪಾಕ್​ ನುಸುಳುಕೋರ

ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಬಳಿ ಒಳನುಗ್ಗಲು ಯತ್ನಿಸಿ, ಬಿಎಸ್‌ಎಫ್ ಸಿಬ್ಬಂದಿಯ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಪಾಕಿಸ್ತಾನದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ..

Arrested Pak intruder succumbs to bullet injuries at Jammu hospital
ಜಮ್ಮು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪಾಕ್​ ನುಸುಳುಕೋರ ಸಾವು

By

Published : May 29, 2021, 2:21 PM IST

ಜಮ್ಮು-ಕಾಶ್ಮೀರ : ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಪಾಕಿಸ್ತಾನದ ವ್ಯಕ್ತಿ ಇಂದು ಜಮ್ಮುವಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮೇ 18 ರಂದು ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಬಳಿ ಒಳನುಗ್ಗಲು ಯತ್ನಿಸಿದ್ದ ಲಾಹೋರ್‌ ನಿವಾಸಿ ಸೈಯದ್ ರಾಜಾ ಆಸೀಮ್ (27) ಎಂಬಾತನಿಗೆ ಎಚ್ಚರಿಕೆಯ ಬಳಿಕವೂ ಮಾತು ಕೇಳದಿದ್ದಕ್ಕೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಗುಂಡು ಹಾರಿಸಿದ್ದರು.

ಇದನ್ನೂ ಓದಿ: 'ಆರ್ಗ್ಯಾನಿಕ್​​ ಬ್ಯೂಟಿ' ಹೆಸರಿನಲ್ಲಿ Sex Racket: ಐವರು ಮಹಿಳೆಯರ ಬಂಧನ

ಗಂಭೀರವಾಗಿ ಗಾಯಗೊಂಡಿದ್ದ ಈತನಿಗೆ ಬಿಎಸ್‌ಎಫ್ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ, ತಕ್ಷಣವೇ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು - ಆಸ್ಪತ್ರೆ (ಜಿಎಂಸಿ)ಗೆ ದಾಖಲಿಸಿದ್ದರು. ಆದರೆ, ಆತ ಇದೀಗ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details