ಕರ್ನಾಟಕ

karnataka

ETV Bharat / bharat

ಹೂಡಿಕೆದಾರರನ್ನು ವಂಚಿಸಿದ ಆರೋಪ: ಸಹಾರಾ ಗ್ರೂಪ್ ಅಧ್ಯಕ್ಷರ ಬಂಧನಕ್ಕೆ ವಾರಂಟ್

ಸಹಾರಾ ಗ್ರೂಪ್ ಅಧ್ಯಕ್ಷನ ಬಂಧನಕ್ಕೆ ವಾರಂಟ್ ಹೊರಡಿಸಲಾಗಿದೆ. ಹಾಗೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಸಹಾರಾ ಗ್ರೂಪ್ ಅಧ್ಯಕ್ಷನ ಬಂಧನಕ್ಕೆ ವಾರಂಟ್
ಸಹಾರಾ ಗ್ರೂಪ್ ಅಧ್ಯಕ್ಷನ ಬಂಧನಕ್ಕೆ ವಾರಂಟ್

By

Published : Dec 23, 2021, 10:21 PM IST

ಗುಣ(ಮಧ್ಯಪ್ರದೇಶ): ಹೂಡಿಕೆದಾರರನ್ನು ವಂಚಿಸಿದ ಕೈಗಾರಿಕೋದ್ಯಮಿ ಮತ್ತು ಸಹಾರಾ ಗ್ರೂಪ್ ಅಧ್ಯಕ್ಷ ಸುಬ್ರತಾ ರಾಯ್ ವಿರುದ್ಧ ಮಧ್ಯಪ್ರದೇಶದ ಗುಣ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಹೊರಡಿಸಿದ ವಾರಂಟ್​​ನಲ್ಲಿ ರಾಯ್, ಅವರ ಪತ್ನಿ ಸ್ವಪ್ನಾ ರಾಯ್ ಸೇರಿದಂತೆ ಇತರ ಐವರನ್ನು ಬಂಧಿಸಲು ಆದೇಶ ನೀಡಲಾಗಿದೆ.

ಹೂಡಿಕೆದಾರರಿಗೆ ರಾಯ್ ಮೋಸ ಮಾಡಿದ್ದರಿಂದ ರಜತ್ ಶರ್ಮಾ ಮತ್ತು ಇತರರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪರಿಣಾಮ ಸುಬ್ರತಾ ರಾಯ್, ಅವರ ಪತ್ನಿ ಸ್ವಪ್ನಾ ರಾಯ್, ಜೆಬಿ ರಾಯ್, ಒಪಿ ಶ್ರೀವಾಸ್ತವ, ಶಂಕರಚರಣ್ ಶ್ರೀವಾಸ್ತವ ಮತ್ತು ಶಿವಾಜಿ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 406 ಮತ್ತು ಮಧ್ಯಪ್ರದೇಶ ಠೇವಣಿದಾರರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4 ಮತ್ತು 6(1) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಆರೋಪಿಗಳನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವಾಗದ ಹಿನ್ನೆಲೆ ವಾರಂಟ್ ಹೊರಡಿಸಲಾಗಿದೆ. ಆರೋಪಿಗಳ ಚರ ಮತ್ತು ಸ್ಥಿರ ಆಸ್ತಿಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಭವಿಷ್ಯದಲ್ಲಿ ಹೂಡಿಕೆದಾರರ ಹಣವನ್ನು ವಸೂಲಿ ಮಾಡಲು ಆಸ್ತಿಗಳನ್ನು ಹರಾಜು ಹಾಕಲು ಮುಂದಾಗಿದ್ದಾರೆ.

For All Latest Updates

ABOUT THE AUTHOR

...view details