ಹಿಸಾರ್ (ಹರಿಯಾಣ): ಪೊಲೀಸರು ನಿಮ್ಮನ್ನು ಬಂಧಿಸಲು ಬಂದರೆ ನೀವೇ ಪೊಲೀಸರನ್ನು ಬಂಧಿಸಿ ಎಂದು ಹರಿಯಾಣದ ಭಾರತೀಯ ಕಿಸಾನ್ ಯೂನಿಯನ್ ನಾಯಕ ಗುರ್ನಮ್ ಸಿಂಗ್ ಚಾದುನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಸಾರ್ ಜಿಲ್ಲೆಯಲ್ಲಿ ನಡೆಯುತ್ತಿರುವ ಕಿಸಾನ್ ಪಂಚಾಯತ್ ಉದ್ದೇಶಿಸಿ ಮಾತನಾಡುತ್ತ, ನಾವು ಟ್ರ್ಯಾಕ್ಟರ್ ಱಲಿ ಮಾಡಲು ದೆಹಲಿಗೆ ಹೊರಟಾಗ ಸಾವಿರಾರು ರೈತರಿಗೆ ನೋಟಿಸ್ ನೀಡಿದ್ದಾರೆ. ಯಾರಾದರು ದೆಹಲಿಗೆ ಹೋದರೆ ಅವರನ್ನು ದೆಹಲಿಯಲ್ಲಿಯೇ ತಡೆಯಲಾಗುತ್ತಿದೆ. ದೆಹಲಿ ಪೊಲೀಸರಿಂದ ನೋಟಿಸ್ ಬಂದಿದ್ದರೆ ಆ ರೈತರು ದೆಹಲಿಗೆ ಹೋಗಬೇಡಿ ಎಂದರು.