ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣದ (SSC scam) ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ, ನಟಿ ಅರ್ಪಿತಾ ಮುಖರ್ಜಿ ಅವರ ಬಂಧನ ಮಾಡಲಾಗಿದೆ. ತನಿಖೆ ವೇಳೆ ವಶಪಡಿಸಿಕೊಂಡ 50 ಕೋಟಿ ರೂ. ಮತ್ತು 5 ಕೋಟಿ ಮೌಲ್ಯದ ಚಿನ್ನಾಭರಣ ಪಾರ್ಥ ಚಟರ್ಜಿಗೆ ಸೇರಿದೆ ಎಂದಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಮೊದಲ ಚಾರ್ಜ್‌ಶೀಟ್‌ನಲ್ಲಿ ಇದನ್ನು ಉಲ್ಲೇಖಿಸಿದೆ.
ತನ್ನ ತಾಯಿಯ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದ್ದರಿಂದ ತಾನು ಇಲ್ಲಿಯವರೆಗೆ ಸತ್ಯ ಮರೆಮಾಚಿದ್ದೆ ಎಂದು ಅರ್ಪಿತಾ ಹೇಳಿದ್ದಾರೆ. ಮೂಲಗಳ ಪ್ರಕಾರ, ಅರ್ಪಿತಾ ಮುಖರ್ಜಿ ಅವರ ಲಿಖಿತ ಹೇಳಿಕೆಯನ್ನು ಇಡಿ ತಮ್ಮ ಚಾರ್ಜ್ ಶೀಟ್‌ನಲ್ಲಿ ಹೈಲೈಟ್ ಮಾಡಿದೆ.
ಏನನ್ನೂ ಬಹಿರಂಗಪಡಿಸದ ಪಾರ್ಥ: ಹೈ - ಪ್ರೊಫೈಲ್ ಬಂಧನದ ನಂತರ ತನಿಖಾಧಿಕಾರಿಗಳು ವಶಪಡಿಸಿಕೊಂಡ ಅಪಾರ ಪ್ರಮಾಣದ ಹಣದ ನಿಖರವಾದ ಮೂಲವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಪತ್ತೆದಾರರು ವಿಚಾರಣೆ ನಡೆಸಿದ್ದಾರೆ. ಆದರೆ, ಪಾರ್ಥ ಅವರು ಇದುವರೆಗೂ ಏನನ್ನೂ ಬಹಿರಂಗಪಡಿಸಿಲ್ಲ.