ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ರಾಜ್ಯಸಭಾ ಸಂಸದರ ವೇತನ, ಭತ್ಯೆ ಮತ್ತು ಸೌಲಭ್ಯಗಳಿಗಾಗಿ ಸುಮಾರು 200 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಅರ್ಜಿಗೆ ರಾಜ್ಯಸಭಾ ಸಚಿವಾಲಯ ಉತ್ತರಿಸಿದೆ. 2021- 22ರಲ್ಲಿ ರಾಜ್ಯಸಭಾ ಸದಸ್ಯರಿಗಾಗಿ ಬೊಕ್ಕಸವು 97 ಕೋಟಿ ರೂ. ವ್ಯಯಿಸಿದೆ. ಇದರಲ್ಲಿ ದೇಶೀಯ ಪ್ರಯಾಣದ ಮೇಲೆ 28.5 ಕೋಟಿ ರೂ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ 1.28 ಕೋಟಿ ರೂ. ವೇತನ 57.6 ಕೋಟಿ ರೂ., ವೈದ್ಯಕೀಯ ಬಿಲ್ 17 ಲಕ್ಷ ರೂ ಮತ್ತು ಕಚೇರಿ ವೆಚ್ಚ 7.5 ಕೋಟಿ ರೂ. ಸಂಸದರಿಗೆ ಮಾಹಿತಿ ತಂತ್ರಜ್ಞಾನದ ನೆರವಿಗಾಗಿ 1.2 ಕೋಟಿ ರೂ. ವ್ಯಯಿಸಿದ ಲೆಕ್ಕವಿದೆ.
2022- 23ರ ಅವಧಿಯಲ್ಲಿ ಸದಸ್ಯರ ವೇತನಕ್ಕೆ 58.5 ಕೋಟಿ ರೂ., ದೇಶೀಯ ಪ್ರಯಾಣಕ್ಕೆ 30.9 ಕೋಟಿ ರೂ ಹಾಗೂ ವಿದೇಶಿ ಪ್ರಯಾಣಕ್ಕೆ 2.6 ಕೋಟಿ ರೂ. ವೈದ್ಯಕೀಯ ಬಿಲ್ ರೂ. 65 ಲಕ್ಷ, ಕಛೇರಿ ನಿರ್ವಹಣೆಗೆ 7 ಕೋಟಿ ರೂ ಮತ್ತು ಐಟಿ ಸೇವೆಗಳಿಗಾಗಿ 1.5 ಕೋಟಿ ರೂ. ಖರ್ಚು ಮಾಡಲಾಗಿದೆ.