ಪಣಜಿ, ಗೋವಾ: 2022ರಲ್ಲಿ ಗೋವಾ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈಗಾಗಲೇ ಪಕ್ಷಗಳು ತಯಾರಿ ನಡೆಸಿಕೊಳ್ಳುತ್ತಿವೆ. ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷ ಇಲ್ಲೂ ಕೂಡಾ ತನ್ನ ಪ್ರಭಾವ ಬೆಳೆಸಲು ಮುಂದಾಗಿದೆ.
ಗೋವಾ ಪಣಜಿ, ನವೇಲಿಂ ಮತ್ತು ಸಂಗುವೆಮ್ ಪ್ರದೇಶದಲ್ಲಿ ನಡೆದ ಮೂರು ಕಾರ್ಯಕ್ರಮಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಟಿಎಂಸಿ ಪತ್ರಿಕಾ ಹೇಳಿಕೆಯಲ್ಲಿ ದೃಢಪಡಿಸಿದೆ.
ಅಕ್ಟೋಬರ್ 28ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರುವ ಗೋವಾಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲೇ 300ಕ್ಕೂ ಹೆಚ್ಚು ಮಂದಿ ಟಿಎಂಸಿ ಪಕ್ಷಕ್ಕೆ ಸೇರಿರುವುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ನಾಯಕ ಕಾನ್ಸಿಕಾವೊ ಪೀಕ್ಸೊಟ್ ಸೇರಿದಂತೆ ಬ್ಲಾಕ್ ಮಟ್ಟದ ಎಲ್ಲಾ ಕಾಂಗ್ರೆಸ್ ನಾಯಕರು ಹಾಗೂ 170 ಮಂದಿ ಕಾರ್ಯಕರ್ತರು ನವೇಲಿಂನಲ್ಲಿ ಟಿಎಂಸಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಲುಯಿಜಿನ್ಹೋ ಫಲೈರೊ ಅವರ ಸಮ್ಮುಖದಲ್ಲಿ ಗೋವಾ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ ಎಂದು ಪಕ್ಷದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಇಷ್ಟೇ ಅಲ್ಲದೇ ಸೇಂಟ್ ಕ್ರೂಜ್‌ನ ಹಿರಿಯ ಕಾಂಗ್ರೆಸ್ ನಾಯಕರು ಪಣಜಿಯಲ್ಲಿ ಪಶ್ಚಿಮ ಬಂಗಾಳದ ರಾಜ್ಯ ಸಚಿವ ಮಾನಸ್ ರಂಜನ್ ಭುನಿಯಾ ಮತ್ತು ಗೋವಾ ತೃಣಮೂಲ ಕಾಂಗ್ರೆಸ್ ನಾಯಕರಾದ ಯತೀಶ್ ನಾಯಕ್ ಮತ್ತು ಮಾರಿಯೋ ಪಿಂಟೋ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದರು.
ಅದೇ ರೀತಿ, ರಾಜ್ಯಸಭೆಯಲ್ಲಿ ಟಿಎಂಸಿಯ ಸಂಸದೀಯ ನಾಯಕ, ಡೆರೆಕ್ ಒಬ್ರಿಯಾನ್ ಮತ್ತು ಸಂಗುಯೆಮ್‌ನ ಪಕ್ಷೇತರ ಶಾಸಕರಾದ ಪ್ರಸಾದ್ ಗಾಂವ್ಕರ್ ಅವರ ಸಮ್ಮುಖದಲ್ಲಿ ಸರ್ಪಂಚ್ಗಳು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ತೃಣಮೂಲ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ:ಸೆಂಟ್ರಲ್ ಸೊಮಾಲಿಯಾದಲ್ಲಿ ಸಂಘರ್ಷ: 20ಕ್ಕೂ ಹೆಚ್ಚು ಮಂದಿ ಸಾವು