ಕಾಬೂಲ್(ಅಫ್ಘಾನಿಸ್ತಾನ): 150 ಮಂದಿ ಭಾರತದ ಪ್ರಜೆಗಳ ವಿಚಾರಣೆ ನಡೆಸಿದ ತಾಲಿಬಾನ್ ಉಗ್ರರು ಅವರೆಲ್ಲರನ್ನೂ ವಾಪಸ್ ಕಾಬೂಲ್ ಏರ್ಪೋರ್ಟ್ಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಆಫ್ಘನ್ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನಿಸ್ತಾನದಿಂದ ಸ್ವದೇಶಕ್ಕೆ ಮರಳಲು ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 150 ಮಂದಿ ಭಾರತೀಯ ಪ್ರಜೆಗಳು ಕಾಯುತ್ತಿದ್ದರು. ಆಗ ಅಲ್ಲಿಗೆ ಏಕಾಏಕಿ ಬಂದ ತಾಲಿಬಾನ್ ರಕ್ಕಸರು ಎಲ್ಲರನ್ನೂ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದರು. ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನೂ ಪರಿಶೀಲಿಸಿದರು. ನಂತರ ಇವರೆಲ್ಲರನ್ನೂ ವಾಪಸ್ ಕಾಬೂಲ್ ಏರ್ಪೋರ್ಟ್ಗೆ ಕಳುಹಿಸಿದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕಾಬೂಲ್ನಿಂದ 85 ಮಂದಿ ಭಾರತೀಯರನ್ನು ಭಾರತೀಯ ವಾಯು ಸೇನೆಯ ವಿಮಾನ ತಜಿಕಿಸ್ತಾನಕ್ಕೆ ಕರೆದುಕೊಂಡು ಬಂದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ.
ಯುದ್ಧ ಪೀಡಿತ ಅಫ್ಘಾನಿಸ್ತಾದಿಂದ ಇವರೆಲ್ಲರನ್ನೂ ಸದ್ಯದಲ್ಲೇ ಏರ್ಲಿಫ್ಟ್ ಮಾಡಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.